ತೃಣಮೂಲ ಕಾಂಗ್ರೆಸ್ ಪಕ್ಷ ಅಲ್ಲ, ತೃಣಮೂಲ ಪಕ್ಷ !

Update: 2019-03-23 17:34 GMT

ಹೊಸದಿಲ್ಲಿ, ಮಾ. 23: ಕಾಂಗ್ರೆಸ್‌ನಿಂದ ಅಧಿಕೃತವಾಗಿ ಪ್ರತ್ಯೇಕವಾದ 21 ವರ್ಷಗಳ ಬಳಿಕ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷ ತನ್ನ ಚಿಹ್ನೆಯಿಂದ ‘ಕಾಂಗ್ರೆಸ್’ ಅನ್ನು ಕೈಬಿಟ್ಟಿದೆ. ತೃಣಮೂಲ ಪಕ್ಷದ ನೂತನ ಚಿಹ್ನೆಯಲ್ಲಿ ನೀಲಿ ಬಣ್ಣದ ಹಿನ್ನೆಲೆಯಿದೆ ಹಾಗೂ ಹಸಿರು ಬಣ್ಣದಲ್ಲಿ ತೃಣಮೂಲ ಎಂದು ಬರೆಯಲಾಗಿದೆ.

ಈ ಚಿಹ್ನೆಯನ್ನು ಪಕ್ಷ ಕಳೆದ ಒಂದು ವಾರದಿಂದ ಬಳಸುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಆಗಿನ ಆಡಳಿತಾರೂಡ ಸಿಪಿಎಂ ಅನ್ನು ನಿರ್ವಹಿಸುವಲ್ಲಿನ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ 1998ರಲ್ಲಿ ಪಶ್ಚಿಮಬಂಗಾಳದ ಮುಖ್ಯಮಂತ್ರಿಯಾಗಿದ್ದ ಮಮತಾ ಬ್ಯಾನರ್ಜಿ ಕಾಂಗ್ರೆಸ್ ನೊಂದಿಗಿನ ಬಾಂಧವ್ಯ ಕಳೆದುಕೊಂಡು ಪ್ರತ್ಯೇಕ ತೃಣಮೂಲ ಕಾಂಗ್ರೆಸ್ ಪಕ್ಷ ರೂಪಿಸಿದ್ದರು.

ತೃಣಮೂಲ ಕಾಂಗ್ರೆಸ್ ಅನ್ನು ತೃಣಮೂಲ ಎಂದು ಕರೆಯಲಾಗುತ್ತಿದೆ. 21 ವರ್ಷಗಳ ಬಳಿಕ ಬದಲಾಯಿಸುವ ಸಮಯ ಬಂದಿದೆ ಎಂದು ತೃಣಮೂಲ ಪಕ್ಷ ನಾಯಕರೊಬ್ಬರು ಹೇಳಿದ್ದಾರೆ. ತೃಣಮೂಲ ಪಕ್ಷದ ಬ್ಯಾನರ್, ಪೋಸ್ಟರ್ ಹಾಗೂ ಎಲ್ಲ ಸಂವಹನ ವಸ್ತುಗಳಲ್ಲಿ ಕಾಂಗ್ರೆಸ್‌ನ ಹೆಸರನ್ನು ಕೈಬಿಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News