ಗೋವಾ ಉಪಮುಖ್ಯಮಂತ್ರಿಯಾಗಿ ಮನೋಹರ್ ನೇಮಕ

Update: 2019-03-28 17:12 GMT

ಪಣಜಿ, ಮಾ.28: ಬಿಜೆಪಿಗೆ ಸೇರ್ಪಡೆಗೊಂಡ ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿ(ಎಂಜಿಪಿ)ಯ ಶಾಸಕ ಮನೋಹರ್ ಅಜ್‌ಗಾಂವ್‌ಕರ್‌ರನ್ನು ಗೋವಾದ ಉಪಮುಖ್ಯಮಂತ್ರಿಯಾಗಿ ನೇಮಕ ಮಾಡಿರುವುದಾಗಿ ಮೂಲಗಳು ತಿಳಿಸಿವೆ.

ಉಪಮುಖ್ಯಮಂತ್ರಿಯಾಗಿದ್ದ ಎಂಜಿಪಿ ಶಾಸಕ ಸುಧಿನ್ ಧವಳೀಕರ್ ರನ್ನು ಬುಧವಾರ ಸಂಪುಟದಿಂದ ಉಚ್ಚಾಟಿಸಲಾಗಿದ್ದು, ಅವರ ಸ್ಥಾನದಲ್ಲಿ ಅಜ್‌ಗಾಂವ್‌ಕರ್ ನೇಮಕವಾಗಿದೆ. ಗೋವಾ ಫಾರ್ವರ್ಡ್ ಪಾರ್ಟಿಯ ಅಧ್ಯಕ್ಷ ವಿಜಯ್ ಸರ್ದೇಸಾಯಿ ಮತ್ತೊಬ್ಬ ಉಪಮುಖ್ಯಮಂತ್ರಿಯಾಗಿದ್ದಾರೆ.

ಬುಧವಾರ ಎಂಜಿಪಿಯ ಇಬ್ಬರು ಶಾಸಕರಾದ ಅಜ್‌ಗಾಂವ್‌ಕರ್ ಹಾಗೂ ದೀಪಕ್ ಪಾವಸ್ಕರ್ ಬಿಜೆಪಿಗೆ ಸೇರ್ಪಡೆಗೊಂಡಿದ್ದು 40 ಸದಸ್ಯರ ಗೋವಾ ವಿಧಾನಸಭೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ 14 ಸ್ಥಾನಗಳನ್ನು ಹೊಂದಿವೆ. ಮೂರು ಸ್ಥಾನಗಳನ್ನು ಹೊಂದಿ ಬಿಜೆಪಿಯ ಪ್ರಮುಖ ಮೈತ್ರಿ ಪಕ್ಷವಾಗಿದ್ದ ಎಂಜಿಪಿಯ ಬಲ ಈಗ ಕೇವಲ 1ಕ್ಕೆ ಕುಸಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News