ಬಾಂಗ್ಲಾ ಗಗನಚುಂಬಿ ಕಟ್ಟಡದಲ್ಲಿ ಬೆಂಕಿ: 25 ಸಾವು

Update: 2019-03-29 17:37 GMT

ಢಾಕಾ (ಬಾಂಗ್ಲಾದೇಶ), ಮಾ. 29: ಬಾಂಗ್ಲಾದೇಶದ ಗಗನಚುಂಬಿ ಕಟ್ಟಡವೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಶುಕ್ರವಾರ 25ಕ್ಕೇರಿದೆ.

ರಾಜಧಾನಿ ಢಾಕಾದಲ್ಲಿರುವ 22 ಮಹಡಿಯ ‘ಎಫ್ ಆರ್ ಟವರ್’ ಗುರುವಾರ ಬೆಂಕಿಗೆ ಆಹುತಿಯಾಯಿತು. ಈ ಸಂದರ್ಭದಲ್ಲಿ ಕಟ್ಟಡದಲ್ಲಿದ್ದ ಕಚೇರಿಗಳಲ್ಲಿ ನೂರಾರು ಮಂದಿ ಕೆಲಸ ಮಾಡುತ್ತಿದ್ದರು. ಕೆಲವರು ಬೆಂಕಿಯ ಜ್ವಾಲೆಯನ್ನು ತಾಳಲಾರದೆ ಕೆಳಗೆ ಹಾರಿ ಮೃತಪಟ್ಟರು. ಓರ್ವ ಶ್ರೀಲಂಕಾ ಪ್ರಜೆ ಸೇರಿದಂತೆ ಕನಿಷ್ಠ 6 ಮಂದಿ ಈ ರೀತಿಯಾಗಿ ಹಾರಿ ಸಾವು ಕಂಡರು.

ಕೆಲವರು ಕಟ್ಟಡದ ಬದಿಯಲ್ಲಿದ್ದ ಕೇಬಲ್‌ಗಳನ್ನು ಹಿಡಿದುಕೊಂಡು ಕೆಳಗೆ ಜಾರಿ ಬಚಾವಾದರು. ಕಟ್ಟಡದ 8, 9 ಮತ್ತು 10ನೇ ಮಹಡಿಗಳಲ್ಲಿ ಬೆಂಕಿಯ ಜ್ವಾಲೆ ತೀವ್ರವಾಗಿತ್ತು.

‘‘ಬೆಂಕಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 25. 24 ದೇಹಗಳನ್ನು ನಾವು ಅವರ ವಾರೀಸುದಾರರಿಗೆ ಹಸ್ತಾಂತರಿಸಿದ್ದೇವೆ’’ ಎಂದು ಢಾಕಾ ಮೆಟ್ರೊಪಾಲಿಟನ್ ಪೊಲೀಸ್ ಡೆಪ್ಯುಟಿ ಕಮಿಶನರ್ ಮುಸ್ತಾಕ್ ಅಹ್ಮದ್ ಎಎಫ್ ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News