×
Ad

ಅಮಿತ್ ಶಾಗೆ 'ಅಚ್ಛೇ ದಿನ್': 5 ವರ್ಷಗಳಲ್ಲಿ ಪತ್ನಿಯ ಆದಾಯ 16 ಪಟ್ಟು ಹೆಚ್ಚಳ!

Update: 2019-03-30 22:51 IST

ಹೊಸದಿಲ್ಲಿ, ಮಾ.30: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಪತ್ನಿ ಸೋನಾಲ್ ಶಾ ಅವರ ಆದಾಯವು ಕಳೆದ 5 ವರ್ಷಗಳಲ್ಲಿ 16 ಪಟ್ಟು ಹೆಚ್ಚಳವಾಗಿದೆ. 5 ವರ್ಷಗಳ ಹಿಂದೆ 14 ಲಕ್ಷ ರೂ. ಇದ್ದ ಆದಾಯ ಈಗ 2.3 ಕೋಟಿ ರೂ.ಗೆ ತಲುಪಿದೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಗಾಂಧಿನಗರ ಕ್ಷೇತ್ರದಿಂದ ಸ್ಪರ್ಧಿಸುವ ಸಲುವಾಗಿ ಅಮಿತ್ ಶಾ ನಾಮಪತ್ರ ಸಲ್ಲಿಸಿದ್ದು, ಇದರಲ್ಲಿ ಈ ವಿವರಗಳನ್ನು ನೀಡಲಾಗಿದೆ. ನಾಮಪತ್ರದಲ್ಲಿ ಘೋಷಿಸಿರುವ ಪ್ರಕಾರ ಅಮಿತ್ ಶಾರ ಚರಾಸ್ತಿ ಮತ್ತು ಸ್ತಿರಾಸ್ತಿಯ ಒಟ್ಟು ಮೊತ್ತ 31 ಕೋಟಿ ರೂ.

2013ರಲ್ಲಿ ತನ್ನ ನಿಧನರಾದ ತಾಯಿಯ 23 ಕೋಟಿ ರೂ.ಗಳನ್ನು ಬಳುವಳಿಯಾಗಿ ಸ್ವೀಕರಿಸಿದ್ದೇನೆ ಎಂದು ಶಾ ತಿಳಿಸಿದ್ದಾರೆ. 2017-18ರಲ್ಲಿ ಶಾ ಅವರ ಆದಾಯ 53,90,970 ರೂ., 2013-14ರಲ್ಲಿ ಅವರ ಆದಾಯ 41,93,218 ರೂ. 2013-14ರಲ್ಲಿ 14,55,637 ರೂ. ಇದ್ದ ಶಾ ಅವರ ಪತ್ನಿಯ ಆದಾಯ 2017-18ರಲ್ಲಿ 2.3 ಕೋಟಿ ರೂ.

2014-15ರಲ್ಲಿ ಸೋನಾಲ್ ಶಾ ಆದಾಯ 39,75,970 ರೂ., 2015-16ರಲ್ಲಿ ಅದು 1 ಕೋಟಿ ರೂ.ಗೆ ತಲುಪಿತ್ತು. ಚುನಾವಣೆಯ ಹಿನ್ನೆಲೆಯಲ್ಲಿ ಸಲ್ಲಿಸಲಾದ ಅಫಿದಾವಿತ್ ಪ್ರಕಾರ ಅಮಿತ್ ಶಾ ವಿರುದ್ಧ 4 ಕ್ರಿಮಿನಲ್ ಪ್ರಕರಣಗಳು ಇನ್ನೂ ಬಾಕಿಯಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News