ಲೆಕ್ಕ ರಹಿತ ನಗದು; ಫ್ರಾಂಕೊ ಮುಲಕ್ಕಲ್ ನಿಕಟವರ್ತಿಯ ಬಂಧನ
Update: 2019-03-30 23:00 IST
ಜಲಂಧರ್ , ಮಾ. 30: ಕೇರಳದ ಕ್ರೈಸ್ತ ಸನ್ಯಾಸಿನಿ ಅತ್ಯಾಚಾರ ಪ್ರಕರಣದ ಆರೋಪಿ ಫ್ರಾಂಕೊ ಮುಲಕ್ಕಲ್‌ನ ನಿಕಟವರ್ತಿ ಎಂದು ಹೇಳಲಾದ ಫಾದರ್ ಆಂಥೋಣಿ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಜಲಂಧರ್ ಸಮೀಪದ ಪರ್ತಪ್ಪುರದ ಅವರ ನಿವಾಸದಲ್ಲಿ ಲೆಕ್ಕ ರಹಿತ ನಗದು ಪತ್ತೆಯಾದ ಬಳಿಕ ಜಾರಿ ನಿರ್ದೇಶನಾಲಯ ಅವರನ್ನು ಬಂಧಿಸಿದೆ. ವಶಪಡಿಸಿಕೊಳ್ಳಲಾದ ನಗದಿಗೆ ಸಂಬಂಧಿಸಿದ ಯಾವುದೇ ಪುರಾವೆಗಳನ್ನು ಫಾದರ್ ಆಂಥೋಣಿ ಸಲ್ಲಿಸಿಲ್ಲ ಎಂದು ಹೇಳಲಾಗಿದೆ.
2014 ಹಾಗೂ 2016ರ ನಡುವೆ ಕ್ರೈಸ್ತ ಸನ್ಯಾಸಿನಿಯನ್ನು ಹಲವು ಬಾರಿ ಅತ್ಯಾಚಾರ ಎಸಗಿದ ಪ್ರಕರಣದ ಆರೋಪಿಯಾಗಿರುವ ಫ್ರಾಂಕೊ ಮುಲಕ್ಕಲ್ ಪ್ರಸ್ತುತ ಜಾಮೀನಿನಲ್ಲಿದ್ದಾರೆ.