ವೈವಾಹಿಕ ಅತ್ಯಾಚಾರ ಪ್ರಕರಣ ದಾಖಲು: ನಿರ್ದೇಶನ ನೀಡುವಂತೆ ಸುಪ್ರೀಂಗೆ ಮನವಿ

Update: 2019-03-30 17:54 GMT

ಹೊಸದಿಲ್ಲಿ, ಮಾ. 30: ವೈವಾಹಿಕ ಅತ್ಯಾಚಾರಕ್ಕೆ ಸಂಬಂಧಿಸಿ ಪ್ರಕರಣ ದಾಖಲಿಸಲು ಸ್ಪಷ್ಟ ಮಾರ್ಗಸೂಚಿ ನೀಡಲು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

ನ್ಯಾಯವಾದಿ ಅನುಜ್ ಕಪೂರ್ ಶುಕ್ರವಾರ ಸಲ್ಲಿಸಿದ ದೂರಿನಲ್ಲಿ, ವೈವಾಹಿಕ ಅತ್ಯಾಚಾರ ವಿವಾಹ ವಿಚ್ಛೇದನಕ್ಕೆ ನೆಲೆಯನ್ನಾಗಿಸುವುದಕ್ಕೆ ಸಂಬಂಧಿಸಿ ಸೂಕ್ತ ಕಾನೂನು ಹಾಗೂ ಬೈಲಾದೊಂದಿಗೆ ಅಗತ್ಯದ ಮಾರ್ಗಸೂಚಿಗಳನ್ನು ರೂಪಿಸುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡುವಂತೆ ಸುಪ್ರೀಂ ಕೋರ್ಟ್ ಅನ್ನು ಆಗ್ರಹಿಸಲಾಗಿದೆ.

ನ್ಯಾಯವಾದಿ ಕಪೂರ್ ಅವರ ಅರ್ಜಿ ಮುಂದಿನ ವಾರ ನ್ಯಾಯಾಲಯದ ಮುಂದೆ ವಿಚಾರಣೆಗೆ ಬರಲಿದೆ. ಆರೋಪಿಗೆ ದಂಡ ವಿಧಿಸಲು ಅನುಕೂಲವಾಗುವಂತೆ ಸಂಬಂಧಿತ ಅಧಿಕಾರಿಗಳು ಉತ್ತರದಾಯಿತ್ವ ಹಾಗೂ ಬಾಧ್ಯತೆ ಹೊಂದಲು ವೈವಾಹಿಕ ಅತ್ಯಾಚಾರದ ವಿಷಯಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ದಾಖಲಿಸಲು ಸೂಕ್ತ ಮಾರ್ಗದರ್ಶಿ ಸೂತ್ರಗಳು ರೂಪಿಸಬೇಕು ಬೇಕು ಎಂದು ಕಪೂರ್ ಆಗ್ರಹಿಸಿದ್ದಾರೆ.

 ವೈವಾಹಿಕ ಅತ್ಯಾತಾರ, ವೈವಾಹಿಕ ಜೀವನದಲ್ಲಿ ಬಲವಂತದ ಲೈಂಗಿಕ ಕ್ರಿಯೆ ಹಾಗೂ ವೈವಾಹಿಕ ಅಪರಾಧೀಕರಣವನ್ನು ರದ್ದುಗೊಳಿಸಲು ಯಾವುದೇ ಕಾನೂನು ಇಲ್ಲ ಎಂದು 47 ಪುಟಗಳ ದೂರಿನಲ್ಲಿ ನ್ಯಾಯವಾದಿ ಅನುಜ್ ಕಪೂರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News