×
Ad

ಮೋದಿಗೆ ಮತಯಾಚಿಸಲು ತನ್ನ ಫೋಟೊ ಬಳಕೆ: ಚು.ಆಯೋಗಕ್ಕೆ ದೂರು ನೀಡಿದ ದೇಶದ ಮೊದಲ ಮತದಾರ ಶ್ಯಾಮ್ ಶರಣ್ ನೇಗಿ

Update: 2019-03-31 12:56 IST

ಹೊಸದಿಲ್ಲಿ, ಮಾ.31: ಸಾಮಾಜಿಕ ಜಾಲಾತಾಣಗಳಲ್ಲಿ  ಪ್ರಧಾನ ಮಂತ್ರಿ ನರೇಂದ್ರ ಮೋದಿ ಪರ ಮತ ಯಾಚನೆಯ  ಪಟ್ಟಿಯಲ್ಲಿ  ತನ್ನ ಹೆಸರನ್ನು ಸೇರಿಸಿದಕ್ಕಾಗಿ ಭಾರತದ ಮೊದಲ ಮತದಾರ  ಹಿಮಾಚಲ ಪ್ರದೇಶದ ಶ್ಯಾಮ್ ಶರಣ್  ನೇಗಿ ಅವರು ಬಿಜೆಪಿ ನಾಯಕ ಪುಷ್ಪರಾಜ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

ಪುಷ್ಪರಾಜ್ ಅವರು  ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಮತ ನೀಡುವಂತೆ ಚೌಕಿದಾರ್ ಶ್ಯಾಮ್ ಶರಣ್  ನೇಗಿ ಮನವಿ ಮಾಡಿರುವುದಾಗಿ ಸೋಶಿಯಲ್ ಮೀಡಿಯಾಕ್ಕೆ   ಪೋಸ್ಟ್ ಮಾಡಿದ್ದರು.

ತನ್ನ ಅನುಮತಿಯಿಲ್ಲದೆ ಟ್ವಿಟರ್ ನಲ್ಲಿ ತನ್ನ ಫೋಟೊದೊಂದಿಗೆ ಮೋದಿ ಪರ ಮತ ಕೇಳಿದ  ಬಿಜೆಪಿ ನಾಯಕ ಪುಷ್ಪರಾಜ್ ಅವರ   ವಿರುದ್ಧ ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲಾಧಿಕಾರಿ ಗೋಪಾಲ್ ಚಂದ್ ಗೆ ಲಿಖಿತ ದೂರು ಸಲ್ಲಿಸಿ , ಸೂಕ್ತ ಕ್ರಮ ಕೈಗೊಳ್ಳುವಂತೆ ಶ್ಯಾಮ್ ಶರಣ್  ನೇಗಿ ಆಗ್ರಹಿಸಿದ್ದಾರೆ.

ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯ ಕಲ್ಬಾ ಗ್ರಾಮದ 102ರ ಹರೆಯದ ಶ್ಯಾಮ್ ಶರಣ್ ನೇಗಿ ಅವರು “ ತಾನು ಸಾಮಾಜಿಕ ಜಾಲ ತಾಣವನ್ನು ಬಳಸುತ್ತಿಲ್ಲ. ನನ್ನ ಪರ ಸಾಮಾಜಿಕ ಜಾಲಾ ತಾಣಗಳಲ್ಲಿ ಖಾತೆ  ನಿರ್ವಹಣೆಗೆ ಯಾರಿಗೂ ಅನುಮತಿ ನೀಡಿಲ್ಲ. ರಾಜಕೀಯ ಉದ್ದೇಶಕ್ಕಾಗಿ ನನ್ನ ಫೋಟೊವನ್ನು ಬಳಸಿದರೆ ಅವರ ವಿರುದ್ಧ ಕಾನೂನು ಪ್ರಕಾರ ಕೈಗೊಳ್ಳುವಂತೆ '' ನೇಗಿ ಒತ್ತಾಯಿಸಿದ್ದಾರೆ.

ಮತದಾನ ಮಾಡುವಂತೆ ಮತದಾರರಲ್ಲಿ ಜಾಗೃತಿ ಮೂಡಿಸಲು ರಾಜ್ಯ ಸರಕಾರ ತನ್ನ ಫೋಟೊವನ್ನು ಬಳಸಬಹುದು  ಎಂದು ನೇಗಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News