ಆದಿತ್ಯನಾಥ್ ಸಮಾವೇಶದ ಮೊದಲ ಸಾಲಿನಲ್ಲಿ ಅಖ್ಲಾಕ್ ಹತ್ಯೆ ಪ್ರಕರಣದ ಆರೋಪಿಗಳು!

Update: 2019-04-01 08:15 GMT

ಹೊಸದಿಲ್ಲಿ, ಎ.1: ಬೀಫ್ ಹೊಂದಿದ್ದಾರೆಂದು ಆರೋಪಿಸಿ 2015ರಲ್ಲಿ ದಾದ್ರಿಯಲ್ಲಿ ಮುಹಮ್ಮದ್ ಅಖ್ಲಾಕ್ ರನ್ನು ಥಳಿಸಿ ಕೊಂದ ಪ್ರಕರಣದ ಆರೋಪಿಗಳು ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ರ ಚುನಾವಣಾ ಪ್ರಚಾರ ಸಮಾವೇಶದ ಮೊದಲ ಸಾಲಿನಲ್ಲಿ ಕಾಣಿಸಿಕೊಂಡಿರುವುದು ಇದೀಗ ವಿವಾದ ಸೃಷ್ಟಿಸಿದೆ.

ಮುಹಮ್ಮದ್ ಅಖ್ಲಾಕ್ ರ ಕೊಲೆ ಆರೋಪಿಗಳು ಈಗ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದು, ಪ್ರಮುಖ ಆರೋಪಿ ವಿಶಾಲ್ ರಾಣಾ ಸೇರಿ ನಾಲ್ವರು ಗ್ರೇಟರ್ ನೊಯ್ಡಾದ ಬಿಸಾಡ ಗ್ರಾಮದಲ್ಲಿ ನಡೆದ ಆದಿತ್ಯನಾಥ್ ರ ಚುನಾವಣಾ ಪ್ರಚಾರ ಸಮಾವೇಶದ ಮೊದಲ ಸಾಲಿನಲ್ಲಿ ಜೈಕಾರ ಕೂಗುತ್ತಿರುವುದು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ.

ಮನೆಯಲ್ಲಿ ಬೀಫ್ ಮಾಂಸವಿದೆ ಎಂಬ ಶಂಕೆಯಲ್ಲಿ 2015ರ ಸೆಪ್ಟಂಬರ್ ನಲ್ಲಿ 55 ವರ್ಷದ ಅಖ್ಲಾಕ್ ರನ್ನು ಮನೆಯಿಂದ ಹೊರಗೆಳೆದಿದ್ದ ದುಷ್ಕರ್ಮಿಗಳು ಅವರನ್ನು ಥಳಿಸಿ ಕೊಂದಿದ್ದರು. ಅಖ್ಲಾಕ್ ಪುತ್ರ ದಾನಿಷ್ ರಿಗೂ ಥಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News