×
Ad

ತೆರಿಗೆ ವಂಚನೆ: ಸೈಯದ್ ಗೀಲಾನಿಯ ದಿಲ್ಲಿ ನಿವಾಸ ಮುಟ್ಟುಗೋಲು

Update: 2019-04-01 20:41 IST

ಹೊಸದಿಲ್ಲಿ,ಎ.1: ಆದಾಯ ತೆರಿಗೆ ಇಲಾಖೆಯು 3.62 ಕೋ.ರೂ.ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗೀಲಾನಿಯ ದಕ್ಷಿಣ ದಿಲ್ಲಿಯ ಮಾಳವೀಯ ನಗರದಲ್ಲಿನ ನಿವಾಸವನ್ನು ಸೋಮವಾರ ಮುಟ್ಟುಗೋಲು ಹಾಕಿಕೊಂಡಿದೆ.

1996-97ರಿಂದ 2001-02ರವರೆಗಿನ ತೆರಿಗೆ ವರ್ಷಗಳಿಗೆ ಆದಾಯ ತೆರಿಗೆಯನ್ನು ಪಾವತಿಸಲು ವಿಫಲಗೊಂಡಿದ್ದಕ್ಕಾಗಿ ಇಲಾಖೆಯು ಈ ಕ್ರಮವನ್ನು ಕೈಗೊಂಡಿದ್ದು,ಗೀಲಾನಿ ಈ ಆಸ್ತಿಯನ್ನು ಪರಭಾರೆ ಮಾಡುವುದನ್ನು ನಿರ್ಬಂಧಿಸಿದೆ.

ಕಳೆದ ತಿಂಗಳು ಜಾರಿ ನಿರ್ದೇಶನಾಲಯವು ಅಕ್ರಮವಾಗಿ ವಿದೇಶಿ ಕರೆನ್ಸಿಯನ್ನು ಹೊಂದಿದ್ದ 17ವರ್ಷಗಳಷ್ಟು ಹಿಂದಿನ ಪ್ರಕರಣದಲ್ಲಿ ಗೀಲಾನಿಗೆ 14.40 ಲ.ರೂ.ದಂಡವನ್ನು ವಿಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News