ತೆಲಂಗಾಣದಲ್ಲಿ ಮಾವೋ ನಾಯಕ, ಇಬ್ಬರ ಬಂಧನ
ಹೈದರಾಬಾದ್,ಎ.2: ಓರ್ವ ಮಾವೋವಾದಿ ನಾಯಕ ಹಾಗೂ ಇತರ ಇಬ್ಬರನ್ನು ಬಂಧಿಸಿರುವುದಾಗಿ ತೆಲಂಗಾಣ ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಬಂಧಿತ ಆರೋಪಿಗಳನ್ನು ಮಾವೋವಾದಿಗಳಾದ ಎಸ್.ಸೋಮ, ಎಂ.ಹಿದ್ಮ ಮತ್ತು ಮುಹಮ್ಮದ್ ಖಾದರ್ ಎಂದು ಗುರುತಿಸಲಾಗಿದೆ.
ಎಸ್.ಸೋಮ ಸಿಪಿಐ(ಮಾವೋವಾದಿ)ಯ ಸಕ್ರಿಯ ಸದಸ್ಯನಾಗಿದ್ದ ಮತ್ತು ತೀವ್ರವಾದಿ ಸೇನಾಪಡೆಯ ಕಮಾಂಡರ್ ಆಗಿದ್ದ ಎಂದು ಪೊಲೀಸ್ ವರಿಷ್ಠಾಧಿಕಾರಿ ಸುನಿಲ್ ದತ್ತ್ ತಿಳಿಸಿದ್ದಾರೆ. ಸೋಮಾ ಈ ಹಿಂದೆ ಭದ್ರತಾ ಪಡೆಗಳ ವಿರುದ್ಧ ಅನೇಕ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿದ್ದ ಮತ್ತು ಇತ್ತೀಚೆಗೆ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ವಿರುದ್ಧ ಎನ್‌ಕೌಂಟರ್‌ನಲ್ಲೂ ಭಾಗಿಯಾಗಿದ್ದ ಎಂದು ದತ್ತ್ ತಿಳಿಸಿದ್ದಾರೆ.
ಎಂ.ಹಿದ್ಮ ಮಾವೋವಾದಿ ಪಕ್ಷದ ಸಕ್ರಿಯ ಸದಸ್ಯನಾಗಿದ್ದು ಪಕ್ಷದ ಪೂರೈಕೆದಾರನಾಗಿ ಕಾರ್ಯಾಚರಿಸುತ್ತಿದ್ದ. ಮುಹಮ್ಮದ್ ಖಾದರ್ ತೆಲಂಗಾಣ ಮತ್ತು ಛತ್ತೀಸ್‌ಗಡದ ಗಡಿಭಾಗದಲ್ಲಿ ಪಾದರಕ್ಷೆಗಳ ಮತ್ತು ಹಾರ್ಡ್‌ವೇರ್ ಅಂಗಡಿಗಳನ್ನು ಹೊಂದಿದ್ದ ಎಂದು ಅವರು ತಿಳಿಸಿದ್ದಾರೆ. ಖಾದರ್ ಕಳೆದ ಕೆಲವು ವರ್ಷಗಳಿಂದ ಮಾವೋವಾದಿಗಳಿಗೆ ಸ್ಫೋಟಕಗಳು, ಸಮವಸ್ತ್ರಗಳು ಮತ್ತು ಇತರ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದ ಎಂದು ದತ್ತ್ ತಿಳಿಸಿದ್ದಾರೆ.