ತ್ರಿಶೂರಿನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಈ ಸೆಲೆಬ್ರಿಟಿ…
Update: 2019-04-02 21:49 IST
ತ್ರಿಶೂರು,ಎ.2: ಕೇರಳದ ತ್ರಿಶೂರು ಲೋಕಸಭಾ ಕ್ಷೇತ್ರಕ್ಕೆ ಎನ್‌ಡಿಎ ಅಭ್ಯರ್ಥಿ ಕುರಿತು ಊಹಾಪೋಹಗಳು ದಟ್ಟವಾಗುತ್ತಿದ್ದು,ಬಿಜೆಪಿಯ ರಾಷ್ಟ್ರೀಯ ನಾಯಕತ್ವವು ಈಗಾಗಲೇ ನಾಮನಿರ್ದೇಶಿತ ಸಂಸದರಾಗಿರುವ ಮಲಯಾಳಂ ನಟ ಸುರೇಶ್ ಗೋಪಿ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ.
ವಯನಾಡಿನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಸ್ಪರ್ಧೆಯಿಂದಾಗಿ ತುಷಾರ ವೆಳ್ಳಪಿಲ್ಲಿಯವರನ್ನು ಅಲ್ಲಿ ಕಣಕ್ಕಿಳಿಸಲಾಗಿದ್ದು,ತ್ರಿಶೂರು ಕ್ಷೇತ್ರಕ್ಕಾಗಿ ಎಂ.ಟಿ.ರಮೇಶ್ ಮತ್ತು ಬಿಜೆಪಿ ವಕ್ತಾರ ಬಿ.ಗೋಪಾಲಕೃಷ್ಣನ್ ಅವರ ಹೆಸರುಗಳೂ ಪರಿಶೀಲನೆಯಲ್ಲಿವೆ.
ಗೋಪಿ ತ್ರಿಶೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದರೆ ಇದು ಅವರ ಮೊದಲ ಚುನಾವಣೆಯಾಗಲಿದೆ. ಗೋಪಿ ಚುನಾವಣೆಗಳಲ್ಲಿ ಸ್ಪರ್ಧಿಸಲು ಈ ಹಿಂದೆ ಹಿಂಜರಿದಿದ್ದರಾದರೂ,ತ್ರಿಶೂರಿನಲ್ಲಿ ಜನಾದೇಶ ಕೋರುವ ತನ್ನ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.