ಏರ್ ಇಂಡಿಯಾ ಬೋರ್ಡಿಂಗ್ ಪಾಸ್‌ಗಳ ಮೇಲೆ ಪ್ರಧಾನಿ ಚಿತ್ರ: ಕ್ರಮಕ್ಕೆ ಇಸಿ ಆದೇಶ

Update: 2019-04-02 17:22 GMT

ಮುಂಬೈ,ಎ.2: ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿ ಏರ್ ಇಂಡಿಯಾದ ಬೋರ್ಡಿಂಗ್ ಪಾಸ್‌ಗಳು ಪ್ರಧಾನಿ ನರೇಂದ್ರ ಮೋದಿಯವರ ಚಿತ್ರವನ್ನು ಹೊಂದಿರಲು ಕಾರಣವಾದ ತನ್ನ ಅಧಿಕಾರಿಯ ವಿರುದ್ಧ ಕ್ರಮವನ್ನು ಕೈಗೊಳ್ಳಲು ಸಂಸ್ಥೆಗೆ ನಿರ್ದೇಶ ನೀಡುವಂತೆ ಚುನಾವಣಾ ಆಯೋಗವು ನಾಗರಿಕ ವಾಯುಯಾನ ಸಚಿವಾಲಯಕ್ಕೆ ಸೂಚಿಸಿದೆ. ಕ್ರಮಪಾಲನಾ ವರದಿಯನ್ನು ಒಂದು ವಾರದೊಳಗೆ ತನಗೆ ಸಲ್ಲಿಸುವಂತೆಯೂ ಆಯೋಗವು ಸಚಿವಾಲಯಕ್ಕೆ ಆದೇಶಿಸಿದೆ.

ಸಚಿವಾಲಯದ ಕಾರ್ಯದರ್ಶಿ ಅಜಯ ಕುಮಾರ್ ಅವರಿಗೆ ಮಂಗಳವಾರ ರವಾನಿಸಿರುವ ಪತ್ರದಲ್ಲಿ ಆಯೋಗವು ತನ್ನ ಕಾನೂನುಬದ್ಧ ನಿರ್ದೇಶನಗಳ ಪಾಲನೆಯಲಿ ವೈಫಲ್ಯ ಮತ್ತು ನೀತಿ ಸಂಹಿತೆಯನ್ನು ಜಾರಿಗೊಳಿಸುವಲ್ಲಿ ನಿರ್ಲಕ್ಷದ ಧೋರಣೆಗಾಗಿ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದೆ.

ಈ ಸಂಬಂಧ ತನ್ನ ಮಾ.29ರ ಪತ್ರಕ್ಕೆ ಉತ್ತರಿಸದ್ದಕ್ಕಾಗಿಯೂ ವಾಯುಯಾನ ಕಾರ್ಯದರ್ಶಿಯನ್ನು ಆಯೋಗವು ತೀವ್ರ ತರಾಟೆಗೆತ್ತಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News