ಎ.4ರಂದು ವಯನಾಡಿನಿಂದ ರಾಹುಲ್ ನಾಮಪತ್ರ ಸಲ್ಲಿಕೆ
Update: 2019-04-02 22:53 IST
ಹೊಸದಿಲ್ಲಿ,ಎ.2: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಲೋಕಸಭಾ ಚುನಾವಣೆಗಾಗಿ ವಯನಾಡಿನಿಂದ ತನ್ನ ನಾಮಪತ್ರವನ್ನು ಎ.4ರಂದು ಸಲ್ಲಿಸಲಿದ್ದಾರೆ. ಈ ಸಂದರ್ಭ ಸೋದರಿ ಹಾಗು ಪೂರ್ವ ಉತ್ತರ ಪ್ರದೇಶದ ಉಸ್ತುವಾರಿಯನ್ನು ಹೊಂದಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯವರು ಅವರ ಜೊತೆಯಲ್ಲಿರಲಿದ್ದಾರೆ.
ರಾಹುಲ್ ಉತ್ತರ ಪ್ರದೇಶದ ಅಮೇಠಿಯ ಜೊತೆಗೆ ವಯನಾಡಿನಿಂದಲೂ ಸ್ಪರ್ಧಿಸಲಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಎ.ಕೆ.ಆ್ಯಂಟನಿ ಅವರು ಮಾ.31ರಂದು ಪ್ರಕಟಿಸಿದ್ದರು.
ಮೋದಿಯವರು ದ.ಭಾರತವನ್ನು ದ್ವೇಷಿಸುತ್ತಿದ್ದಾರೆ ಎಂಬ ಭಾವನೆಯಿರುವುದರಿಂದ ಕೇರಳದಿಂದ ಚುನಾವಣಾ ಕಣಕ್ಕಿಳಿಯುವಂತೆ ತನ್ನನ್ನು ಆಗ್ರಹಿಸಲಾಗಿದೆ ಎಂದು ರಾಹುಲ್ ಮಂಗಳವಾರ ಬೆಳಿಗ್ಗೆ ಹೇಳಿದ್ದರು.
20 ಲೋಕಸಭಾ ಸ್ಥಾನಗಳನ್ನು ಹೊಂದಿರುವ ಕೇರಳದಲ್ಲಿ ಎ.23ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ 23ರಂದು ಮತಎಣಿಕೆ ನಡೆಯಲಿದೆ.