ಮೋದಿ ಸಮಾವೇಶಕ್ಕೆ ಜನ ಸೇರಿಸಲು 53 ಲಕ್ಷ ರೂ. ನೀಡಿ 4 ರೈಲು ಬಾಡಿಗೆಗೆ ಪಡೆದುಕೊಂಡ ಬಿಜೆಪಿ: ವರದಿ

Update: 2019-04-03 11:35 GMT

ಕೊಲ್ಕತ್ತಾ, ಎ.3: ಇಲ್ಲಿನ ಪ್ರಸಿದ್ಧ ಬ್ರಿಗೇಡ್ ಗ್ರೌಂಡ್ ನಲ್ಲಿ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿಯವರ ಸಮಾವೇಶಕ್ಕೆ ಜನರನ್ನು ಸೇರಿಸಲು ಪಶ್ಚಿಮ ಬಂಗಾಳ ಬಿಜೆಪಿ 53 ಲಕ್ಷ ರೂ. ವ್ಯಯಿಸಿ 4 ವಿಶೇಷ ರೈಲುಗಳನ್ನು ಬಾಡಿಗೆಗೆ ಪಡೆದುಕೊಂಡಿದೆ ಎಂದು ಬಂಗಾಳದ ದಿನಪತ್ರಿಕೆ ‘ಆನಂದ್ ಬಝಾರ್’ ಪತ್ರಿಕಾ ವರದಿ ಪ್ರಕಟಿಸಿದೆ.

ರಾಜಕೀಯ ಸಮಾವೇಶಗಳಿಗೆ ಬ್ರಿಗೇಡ್ ಗ್ರೌಂಡ್ ಪ್ರಸಿದ್ಧಿ ಹೊಂದಿದೆ. ಸಿಎಂ ಮಮತಾ ಬ್ಯಾನರ್ಜಿಯವರ ಸಮಾವೇಶಗಳು ಕೂಡ ಇಲ್ಲೇ ನಡೆಯುತ್ತದೆ. ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಇತ್ತೀಚಿಗೆ ವಿಪಕ್ಷಗಳ ಸಮಾವೇಶವೂ ಇದೇ ಮೈದಾನದಲ್ಲಿ ನಡೆದಿತ್ತು.

“ಕಾರ್ಯಕ್ರಮದಲ್ಲಿ ಅತೀ ಹೆಚ್ಚು ಜನರನ್ನು ಸೇರಿಸುವುದು ಬಹುಷಃ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಯಾಗಿರಬಹುದು. ಅದೂ ಅತೀ ಕಡಿಮೆ ಅವಧಿಯಲ್ಲಿ. ನಾವು ಪೋಸ್ಟರ್ ಗಳನ್ನೂ ಹಾಕಿಲ್ಲ” ಎಂದು ರಾಜ್ಯ ಸಮಿತಿಯ ನಾಯಕರೊಬ್ಬರು ತಿಳಿಸಿದ್ದಾರೆ ಎಂದು ನ್ಯೂಸ್ 18 ವರದಿ ಮಾಡಿದೆ.

ಜ್ಹಾರ್ಗ್ರಾಮ್, ಲಾಲ್ ಗೋಲಾ ಮತ್ತು ರಾಮ್ಪುರ್ಹತ್ ನಿಂದ ನಾಲ್ಕು ರೈಲುಗಳು ಹೌರಾ ಸ್ಟೇಷನ್ ತಲುಪಲಿದೆ ಎಂದು ‘ಆನಂದಬಝಾರ್ ಪತ್ರಿಕಾ’ದ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News