×
Ad

ಪಬ್‌ಜಿ ಗೇಮ್ ಆಡದೆ ಪರೀಕ್ಷೆಗೆ ಓದು ಎಂದ ಹೆತ್ತವರು: ಬಾಲಕ ಆತ್ಮಹತ್ಯೆ

Update: 2019-04-03 20:42 IST

ಮಡ್ಚಲ್-ಮಲ್ಕಜ್‌ಗಿರಿ, ಎ. 3: ಹತ್ತನೇ ತರಗತಿ ಪರೀಕ್ಷೆಗೆ ಓದದೆ ಆನ್‌ಲೈನ್ ಆಟ ಪಬ್‌ ಜಿ ಆಡುತ್ತಿರುವುದಕ್ಕೆ ಹೆತ್ತವರು ಬೈದಿರುವುದಕ್ಕೆ 10ನೇ ತರಗತಿ ವಿದ್ಯಾರ್ಥಿಯೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಮೃತಪಟ್ಟ ವಿದ್ಯಾರ್ಥಿಯನ್ನು ಮಲ್ಕಜ್‌ಗಿರಿ ಪ್ರದೇಶದ ವಿಷ್ಣುಪುರಿ ಎಕ್ಸ್‌ಟೆನ್ಶನ್‌ನ ನಿವಾಸಿ ಕಲ್ಲಕುರಿ ಸಾಂಬಶಿವ (16) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮಂಗಳವಾರ ಮುಂಜಾನೆ ಮಲ್ಕಜ್‌ಗಿರಿ ಪೊಲೀಸರು ಮಾಹಿತಿ ಸ್ವೀಕರಿಸಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News