ಜೆಎನ್‌ಯು ಪ್ರಕರಣ: ಕನ್ಹಯ್ಯ ವಿಚಾರಣೆಗೆ ಅನುಮತಿ ನೀಡಲು ತಿಂಗಳ ಕಾಲಾವಕಾಶ ಕೋರಿದ ದಿಲ್ಲಿ ಸರಕಾರ

Update: 2019-04-03 15:14 GMT

ಹೊಸದಿಲ್ಲಿ, ಎ. 3: ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯ (ಜೆಎನ್‌ಯು)ದ 2016ರ ರಾಷ್ಟ್ರದ್ರೋಹದ ಪ್ರಕರಣದಲ್ಲಿ ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಹಾಗೂ ಇತರರ ವಿಚಾರಣೆ ನಡೆಸಲು ಅನುಮತಿ ನೀಡಬೇಕೇ ಎಂದು ನಿರ್ಧರಿಸಲು ಒಂದು ತಿಂಗಳ ಕಾಲಾವಕಾಶ ಬೇಕು ಎಂದು ದಿಲ್ಲಿ ಸರಕಾರ ಬುಧವಾರ ನ್ಯಾಯಾಲಯವನ್ನು ಕೋರಿದೆ.

ನಿರ್ದಿಷ್ಟ ಸಮಯ ಮಿತಿ ಉಲ್ಲೇಖಿಸಿ ಸೂಕ್ತ ಪ್ರತಿಕ್ರಿಯೆ ದಾಖಲಿಸುವಂತೆ ಚೀಫ್ ಮೆಟ್ರೋಪಾಲಿಟಿನ್ ದಂಡಾಧಿಕಾರಿ ದೀಪಕ್ ಶೆರಾವತ್ ದಿಲ್ಲಿಯ ಆಪ್ ಸರಕಾರಕ್ಕೆ ನಿರ್ದೇಶಿಸಿದ್ದರು. ಅನುಮತಿ ಕೋರಿ ಈಗಾಗಲೇ ದಿಲ್ಲಿ ಸರಕಾರಕ್ಕೆ ಮನವಿ ಕಳುಹಿಸಲಾಗಿದೆ ಎಂದು ಈ ಹಿಂದೆ ದಿಲ್ಲಿ ಪೊಲೀಸ್ ವಿಶೇಷ ಘಟಕದ ಡಿಸಿಪಿ ಪ್ರಮೋದ್ ಕುಶ್ವಾಹ ನ್ಯಾಯಾಲಯಕ್ಕೆ ತಿಳಿಸಿದ್ದರು. ಅನುಮತಿ ಆಡಳಿತಾತ್ಮಕ ಪ್ರಕ್ರಿಯೆ. ಅದು ಇಲ್ಲದೆಯೂ ಆರೋಪ ಪಟ್ಟಿ ಸಲ್ಲಿಸಬಹುದು ಎಂದು ಅವರು ಹೇಳಿದ್ದರು.

ಪ್ರಕರಣಕ್ಕೆ ಸಂಬಂಧಿಸಿ ಕುಮಾರ್ ಹಾಗೂ ಇತರರ ವಿಚಾರಣೆ ನಡೆಸಲು ಅಗತ್ಯದ ಅನುಮತಿಯನ್ನು ಇದುವರೆಗೆ ನೀಡಿಲ್ಲ ಎಂದು ಈ ಹಿಂದೆ ದಿಲ್ಲಿ ಪೊಲೀಸರು ದಿಲ್ಲಿ ನ್ಯಾಯಾಲಯಕ್ಕೆ ತಿಳಿಸಿದ್ದರು. ಅನುಮತಿ ಪಡೆಯಲು ಎರಡು ಮೂರು ತಿಂಗಳು ಬೇಕಾಗಬಹುದು ಎಂದು ಅವರು ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News