ಮೋದಿ ರ‍್ಯಾಲಿಗೆ ಮುನ್ನ ಅರುಣಾಚಲ ಪ್ರದೇಶ ಸಿಎಂ ಬೆಂಗಾವಲು ವಾಹನದಲ್ಲಿ 1.8 ಕೋಟಿ ರೂ. ಪತ್ತೆ: ಆರೋಪ

Update: 2019-04-03 15:21 GMT

ಹೊಸದಿಲ್ಲಿ, ಎ. 3: ಅರುಣಾಚಲ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರ‍್ಯಾಲಿ ಹಿನ್ನೆಲೆಯಲ್ಲಿ ‘ಮತಕ್ಕಾಗಿ ನಗದು’ ಹಗರಣದಲ್ಲಿ ಬಿಜೆಪಿ ತೊಡಗಿಕೊಂಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಕಪ್ಪು ಹಣದ ಮೂಲಕ ‘ನೋಟು ತೆಗೆದುಕೊಳ್ಳಿ ವೋಟು ಹಾಕಿ’ ಅಭಿಯಾನದಲ್ಲಿ ಬಿಜೆಪಿ ತೊಡಗಿಕೊಂಡಂತೆ ಕಾಣುತ್ತದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ ಹೇಳಿದ್ದಾರೆ.

ಅರುಣಾಚಲಪ್ರದೇಶದ ಮುಖ್ಯಮಂತ್ರಿ ಪೇಮಾ ಖಂಡು ಅವರ ಬೆಂಗಾವಲು ವಾಹನವೊಂದರಲ್ಲಿ 1.8 ಕೋಟಿ ರೂಪಾಯಿ ಪತ್ತೆಯಾಗಿತ್ತು. ಈ ವಿವಾದಾತ್ಮಕ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಲಭ್ಯವಿದೆ ಎಂದು ಅವರು ತಿಳಿಸಿದ್ದಾರೆ. ಈ ನಗದನ್ನು ಅರುಣಾಚಲಪ್ರದೇಶದ ಪಸಿಘಾಟ್‌ನ ಸಿಯಾಂಗ್ ಗೆಸ್ಟ್ ಹೌಸ್‌ನಿಂದ ವಾಹನದ ಮೂಲಕ ವರ್ಗಾವಣೆ ಮಾಡಲಾಗುತ್ತಿತ್ತು. ಸ್ಥಳೀಯ ಯುವ ಕಾಂಗ್ರೆಸ್ ಸದಸ್ಯರ ದೂರಿನ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಅಧಿಕಾರಕ್ಕೆ ಬಂದ 100 ದಿನಗಳ ಒಳಗೆ ಕಪ್ಪು ಹಣವನ್ನು ಹಿಂದೆ ತರುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ನೀಡಿದ್ದ 80 ಲಕ್ಷ ಕೋಟಿ ರೂಪಾಯಿ ಹಣದ ಭಾಗವೇ ಇದು? ಎಂದು ಸುರ್ಜೇವಾಲ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News