ಹಾಲಿ ಕಾರ್ಯಾಚರಣೆಯಲ್ಲಿರುವ ಜೆಟ್ ಏರ್‌ವೇಸ್ ವಿಮಾನಗಳ ಸಂಖ್ಯೆ 15ಕ್ಕೂ ಕಡಿಮೆ: ಪಿಎಸ್.ಖರೋಲಾ
Update: 2019-04-03 21:31 IST
ಹೊಸದಿಲ್ಲಿ,ಎ.3: ಹಾಲಿ ಜೆಟ್ ಏರ್‌ವೇಸ್‌ನ 15ಕ್ಕೂ ಕಡಿಮೆ ವಿಮಾನಗಳು ಕಾರ್ಯಾಚರಿಸುತ್ತಿವೆ ಎಂದು ನಾಗರಿಕ ವಾಯುಯಾನ ಕಾರ್ಯದರ್ಶಿ ಪ್ರದೀಪ ಸಿಂಗ್ ಖರೋಲಾ ಅವರನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.
ಸಾಲದ ಸುಳಿಯಲ್ಲಿ ಸಿಲುಕಿ ದಿವಾಳಿತನದ ಅಂಚಿನಲ್ಲಿದ್ದ ಜೆಟ್ ಏರ್‌ವೇಸ್‌ನ್ನು ಕಳೆದ ತಿಂಗಳು ಸರಕಾರಿ ಸ್ವಾಮ್ಯದ ಬ್ಯಾಂಕುಗಳು ಪಾರುಮಾಡಿವೆ. ಎಸ್‌ಬಿಐ ನೇತೃತ್ವದ ಸಾಲದಾತ ಬ್ಯಾಂಕುಗಳ ಗುಂಪು ತಾತ್ಕಾಲಿಕವಾಗಿ ಕಂಪನಿಯ ಹೆಚ್ಚಿನ ಭಾಗದ ಒಡೆತನ ಹೊಂದಲಿದ್ದು,ಅದಕ್ಕೆ ಹೊಸದಾಗಿ 218 ಬಿಲಿಯನ್ ಡಾಲರ್‌ಗಳ ಸಾಲವನ್ನು ನೀಡಲು ನಿರ್ಧರಿಸಿವೆ.