×
Ad

2 ಲಕ್ಷ ಸರ್ಟಿಫಿಕೇಟ್,ಡಿಪ್ಲೋಮಾ ಮತ್ತು ಪದವಿಗಳ ವಿತರಣೆ

Update: 2019-04-03 22:25 IST

ಹೊಸದಿಲ್ಲಿ,ಎ.3: ವಿಶ್ವದ ಅತ್ಯಂತ ದೊಡ್ಡ ಮುಕ್ತ ವಿಶ್ವವಿದ್ಯಾನಿಲಯವಾಗಿರುವ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿವಿ(ಇಗ್ನೋ)ಯ 32ನೇ ಘಟಿಕೋತ್ಸವವು ಬುಧವಾರ ಇಲ್ಲಿಯ ಬಾಬಾ ಸಾಹೇಬ್ ಅಂಬೇಡ್ಕರ್ ಕನವೆನ್ಷನ್ ಸೆಂಟರ್‌ನಲ್ಲಿ ನಡೆದಿದ್ದು,ಯಶಸ್ವಿ ವಿದ್ಯಾರ್ಥಿಗಳಿಗೆ ಎರಡು ಲಕ್ಷ ಪದವಿಗಳು,ಡಿಪ್ಲೋಮಾಗಳು ಮತ್ತ್ತು ಪ್ರಮಾಣಪತ್ರಗಳನ್ನು ವಿತರಿಸಲಾಯಿತು. 70ಕ್ಕೂ ಅಧಿಕ ಪ್ರತಿಭಾವಂತ ವಿದ್ಯಾರ್ಥಿಗಳು ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡರು.

 ಮುಖ್ಯ ಅತಿಥಿಯಾಗಿದ್ದ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ‘ಶಿಕ್ಷಣದ ಪ್ರಜಾಪ್ರಭುತ್ವೀಕರಣ ಮತ್ತು ತಲುಪದವರನ್ನು ತಲುಪುವ’ ವಿವಿಯ ಧ್ಯೇಯವನ್ನು ಪ್ರಶಂಸಿಸಿದರು. ಅದು ಉನ್ನತ ಕಲಿಕೆಯ ಶಿಕ್ಷಣ ಸಂಸ್ಥೆಗಳಿಗೆ ಹಾಜರಾಗಲು ಸಾಧ್ಯವಾಗದ ಹಲವಾರು ಶಿಕ್ಷಣಾರ್ಥಿಗಳಿಗೆ ಜ್ಞಾನವು ಕೈಗೆಟಕುವಂತೆ ಮಾಡಿದೆ ಎಂದರು. ನಿತ್ಯ ಬದಲಾಗುತ್ತಿರುವ ಜಗತ್ತಿನಲ್ಲಿ ಸ್ಪರ್ಧಾತ್ಮಕವಾಗಿರಲು ವಿದ್ಯಾರ್ಥಿಗಳು ನಿರಂತರ ಕಲಿಯುತ್ತಲೇ ಇರುವ ಅಗತ್ಯಕ್ಕೆ ಅವರು ಒತ್ತು ನೀಡಿದರು.

ಭಾರತವನ್ನು ಜ್ಞಾನ ಮತ್ತು ಹೊಸತನದ ಕೇಂದ್ರವನ್ನಾಗಿ ಮರುಸ್ಥಾಪಿಸುವಂತೆ ಯುವಜನರನ್ನು ಆಗ್ರಹಿಸಿದ ಅವರು,ಇದಕ್ಕಾಗಿ 21ನೇ ಶತಮಾನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ತ್ವರಿತವಾಗಿ ಬದಲಾಗುತ್ತಿರುವ ಅಗತ್ಯಗಳನ್ನು ಪೂರೈಸಲು ನಾವು ನಮ್ಮ ಉನ್ನತ ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣವಾಗಿ ಪುನಃಶ್ಚೇತನಗೊಳಿಸಬೇಕಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News