ಅರೆ ಮಿಲಿಟರಿ ಪಡೆಗಳ ಸಿಬ್ಬಂದಿಗಳಿಗೆ ಪಡಿತರ, ಸಂಕಷ್ಟ ಭತ್ಯೆಗಳ ಮೇಲೆ ಆದಾಯ ತೆರಿಗೆ ವಿನಾಯಿತಿ ಸಾಧ್ಯತೆ

Update: 2019-04-03 16:57 GMT

ಹೊಸದಿಲ್ಲಿ,ಎ.3: ಸಿಆರ್‌ಪಿಎಫ್ ಮತ್ತು ಬಿಎಸ್‌ಎಫ್‌ನಂತಹ ಅರೆ ಮಿಲಿಟರಿ ಪಡೆಗಳ ಯೋಧರಿಗೆ ಪಡಿತರ ಹಣ ಭತ್ಯೆ ಹಾಗೂ ಅಪಾಯ ಮತ್ತು ಸಂಕಷ್ಟ ಭತ್ಯೆಗಳ ಮೇಲೆ ಆದಾಯ ತೆರಿಗೆ ವಿನಾಯಿತಿ ದೊರೆಯುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಬುಧವಾರ ಇಲ್ಲಿ ತಿಳಿಸಿದರು. ಇದು ಜಾರಿಗೊಂಡರೆ ಸುಮಾರು ಒಂಭತ್ತು ಲಕ್ಷ ಸಿಬ್ಬಂದಿಗಳಿಗೆ ಲಾಭವಾಗಲಿದೆ.

ಅರೆ ಮಿಲಿಟರಿ ಪಡೆಗಳ ಸಿಬ್ಬಂದಿಗಳ ಈ ಭತ್ಯೆಗಳ ಮೇಲೆ ಆದಾಯ ತೆರಿಗೆ ವಿನಾಯಿತಿಯನ್ನು ನೀಡಬೇಕೆಂಬ ಬೇಡಿಕೆಯನ್ನು ತಾನು ಪರಿಶೀಲಿಸುವುದಾಗಿ ವಿತ್ತ ಇಲಾಖೆಯು ಗೃಹ ಸಚಿವಾಲಯಕ್ಕೆ ಭರವಸೆಯನ್ನು ನೀಡಿದೆ ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.

ರಕ್ಷಣಾ ಪಡೆಗಳು,ಅಸ್ಸಾಂ ರೈಫಲ್ಸ್ ಮತ್ತು ಎನ್‌ಎಸ್‌ಜಿ ಸಿಬ್ಬಂದಿಗಳಿಗೆ ಉಚಿತ ಪಡಿತರವನ್ನು ನೀಡಲಾಗುತ್ತಿದ್ದರೆ, ಪತ್ರಾಂಕಿತೇತರ ಹುದ್ದೆಗಳಲ್ಲಿರುವ ಸಿಆರ್‌ಪಿಎಫ್,ಬಿಎಸ್‌ಎಫ್,ಸಿಐಎಸ್‌ಎಫ್,ಐಟಿಬಿಪಿ ಮತ್ತು ಎಸ್‌ಎಸ್‌ಬಿ ಸಿಬ್ಬಂದಿಗಳಿಗೆ ಮಾಸಿಕ 3,000 ರೂ.ಗಳ ಪಡಿತರ ಹಣ ಭತ್ಯೆಯನ್ನು ನೀಡಲಾಗುತ್ತಿದೆ. ಅಪಾಯ ಮತ್ತು ಸಂಕಷ್ಟ ಭತ್ಯೆಯ ಪ್ರಮಾಣವು ವಿವಿಧ ಅಂಶಗಳನ್ನು ಆಧರಿಸಿ ಮಾಸಿಕ 6,000 ರೂ.ನಿಂದ 25,000 ರೂ.ವರೆಗೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News