‘ಬ್ರೆಕ್ಸಿಟ್’ಗೆ ಜೂನ್ 30ರವರೆಗೆ ಗಡುವು ಕೋರಿದ ತೆರೇಸಾ

Update: 2019-04-05 17:27 GMT

ಲಂಡನ್, ಎ. 5: ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರಲು (ಬ್ರೆಕ್ಸಿಟ್) ಬ್ರಿಟನ್‌ಗೆ ಜೂನ್ 30ರವರೆಗೆ ಅವಕಾಶ ನೀಡಬೇಕು ಎಂದು ಕೋರಿ ಪ್ರಧಾನಿ ತೆರೇಸಾ ಮೇ ಐರೋಪ್ಯ ಕೌನ್ಸಿಲ್ ಅಧ್ಯಕ್ಷ ಡೊನಾಲ್ಡ್ ಟಸ್ಕ್‌ಗೆ ಪತ್ರ ಬರೆದಿದ್ದಾರೆ.

 ಆದಾಗ್ಯೂ, ಐರೋಪ್ಯ ಚುನಾವಣೆಯಲ್ಲಿ ಭಾಗವಹಿಸುವುದನ್ನು ನಿವಾರಿಸುವುದಕ್ಕಾಗಿ ಅದಕ್ಕೂ ಮೊದಲೇ ಬ್ರಿಟನನ್ನು ಐರೋಪ್ಯ ಒಕ್ಕೂಟದಿಂದ ಹೊರತರುವ ಭರವಸೆ ನನಗೆ ಇನ್ನೂ ಇದೆ ಎಂದು ಅವರು ಹೇಳಿದ್ದಾರೆ.

ಇನ್ನೊಂದು ವಾರದಲ್ಲಿ ಬ್ರಿಟನ್ ಒಕ್ಕೂಟದಿಂದ ಹೊರಬರಬೇಕಾಗಿದೆ. ಆದರೆ, ಬ್ರಿಟನ್‌ನ ವಿಭಜಿತ ಸಂಸತ್ತು ಬ್ರೆಕ್ಸಿಟ್ ಒಪ್ಪಂದವೊಂದಕ್ಕೆ ಅನುಮೋದನೆ ನೀಡಲು ವಿಫಲವಾಗಿರುವ ಹಿನ್ನೆಲೆಯಲ್ಲಿ, ಇನ್ನಷ್ಟು ಸಮಯಾವಕಾಶವನ್ನು ಕೋರುವ ಅನಿವಾರ್ಯತೆಗೆ ತೆರೇಸಾ ಮೇ ಒಳಗಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News