ಎಸ್ಪಿ, ಬಿಎಸ್ಪಿ, ಆರ್‌ಎಲ್‌ಡಿ ಪಕ್ಷದ ಮೊತ್ತ ಮೊದಲ ಜಂಟಿ ರ್ಯಾಲಿಗೆ ಚಾಲನೆ
ಲಕ್ನೋ, ಎ.7: ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಹಾಗೂ ರಾಷ್ಟ್ರೀಯ ಲೋಕದಳ(ಆರ್‌ಎಲ್‌ಡಿ)ಉತ್ತರಪ್ರದೇಶದ ಸಹರಾನ್ಪುರದ ದೇವೊಬಂದ್‌ನಲ್ಲಿ ರವಿವಾರ ಮೊತ್ತ ಮೊದಲ ಜಂಟಿ ರ್ಯಾಲಿಯನ್ನು ಆಯೋಜಿಸಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ತನ್ನ ತಪ್ಪು ನೀತಿ ಹಾಗೂ ದ್ವೇಷ ಹರಡುವ ಚಾಳಿಯಿಂದಾಗಿ ಸೋಲುಣ್ಣಲಿದೆ ಎಂದು ಬಿಎಸ್ಪಿ ಅಧಿನಾಯಕಿ ಮಾಯಾವತಿ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷವನ್ನೂ ಟೀಕಿಸಿದ ಮಾಯಾವತಿ,‘‘ ಕಾಂಗ್ರೆಸ್ ಪಕ್ಷ ಕೂಡ ತನ್ನ ತಪ್ಪು ನೀತಿಗಳಿಂದಾಗಿ ಅಧಿಕಾರ ವಂಚಿತವಾಗಿದೆ'' ಎಂದರು.
‘‘ಬಿಜೆಪಿ ಕೂಡ ತನ್ನ ತಪ್ಪು ನೀತಿಯಿಂದಾಗಿಯೇ ಅಧಿಕಾರ ಕಳೆದುಕೊಳ್ಳಲಿದೆ. ಚೌಕಿದಾರ್ ಹಾಗೂ ಜುಂಬ್ಲಾಬಾಜಿಯಿಂದ ಮತ ಗೆಲ್ಲಲು ಸಾಧ್ಯವಿಲ್ಲ. ಪ್ರಧಾನಿ ಮೋದಿ ಹೆಚ್ಚಿನ ಭರವಸೆ ಈಡೇರಿಸಲು ವಿಫಲರಾಗಿದ್ದಾರೆ. ಜನರನ್ನು ತಪ್ಪು ಹಾದಿಗೆ ಎಳೆದು, ಟೊಳ್ಳು ಉದ್ಘಾಟನೆ ಬಿಜೆಪಿಗೆ ನೆರವಾಗುವುದಿಲ್ಲ. ಬಿಜೆಪಿ ತನ್ನ ಪ್ರಚಾರಕ್ಕಾಗಿ ವ್ಯಯಿಸಿರುವ ಸಾವಿರಾರು ಕೋಟಿ ರೂ.ವನ್ನು ಜನ ಕಲ್ಯಾಣಕ್ಕೆ ಬಳಸಬಹುದಿತ್ತು’’ ಎಂದು ಮಾಯಾವತಿ ಹೇಳಿದ್ದಾರೆ.