‘ಚೌಕಿದಾರ್’ ನಾಟಕ ಬಿಜೆಪಿಯನ್ನು ರಕ್ಷಿಸದು: ಮಾಯಾವತಿ

Update: 2019-04-07 15:16 GMT

 ದೇವಬಂದ್, ಎ. 7: ಲೋಕಸಭೆಯ ಮೊದಲ ಹಂತದ ಚುನಾವಣೆಗೆ ವಾರವಿರುವಾಗ ದೇವಬಂದ್‌ನಲ್ಲಿ ರವಿವಾರ ನಡೆದ ಎಸ್ಪಿ ಹಾಗೂ ಆರ್‌ಎಲ್‌ಡಿಯೊಂದಿಗಿನ ಮೊದಲ ಸಂಯಕ್ತ ರ್ಯಾಲಿಯಲ್ಲಿ ಬಿಎಸ್ಪಿ ವರಿಷ್ಠೆ ಮಾಯಾವತಿ ಬಿಜೆಪಿ ಹಾಗೂ ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಬಿಜೆಪಿ ನೀತಿಗಳು ದ್ವೇಷದಿಂದ ಪ್ರೇರಣೆ ಹೊಂದಿರುವುದರಿಂದ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಲಿದೆ. ಮುಖ್ಯವಾಗಿ ಬಿಜೆಪಿಯ ‘ಚೌಕಿದಾರ್’ ಅಭಿಯಾನ. ದೊಡ್ಡ, ಸಣ್ಣ ಚೌಕಿದಾರರು ಎಷ್ಟು ಬೇಕಾದರೂ ಪ್ರಯತ್ನಿಸಲಿ. ಆದರೆ, ಬಿಜೆಪಿ ಜಯ ಗಳಿಸದು ಎಂದು ಅವರು ಹೇಳಿದರು.

ಈ ವರ್ಷದ ಆರಂಭದಲ್ಲಿ ಪಕ್ಷಗಳ ನಡುವಿನ ಮೈತ್ರಿ ಘೋಷಿಸಿದಂದಿನಿಂದ ಎಸ್ಪಿ ಹಾಗೂ ಆರ್‌ಎಲ್‌ಡಿಯೊಂದಿಗಿನ ಮೊದಲ ಸಂಯುಕ್ತ ರ್ಯಾಲಿಯಲ್ಲಿ ಬಿಎಸ್ಪಿ ವರಿಷ್ಠೆ ಮಾಯಾವತಿ ಈ ಹೇಳಿಕೆ ನೀಡಿದ್ದಾರೆ.

ಹಲವು ವರ್ಷಗಳ ಆಡಳಿತ ನಡೆಸಿದ ಹೊರತಾಗಿಯೂ ಕಾಂಗ್ರೆಸ್ ವಿಫಲವಾಗಿದೆ ಎಂದು ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಹಾಗೂ ಆರ್‌ಎಲ್‌ಡಿ ವರಿಷ್ಠ ಅಜಿತ್ ಸಿಂಗ್ ಉಪಸ್ಥಿತರಿದ್ದ ರ್ಯಾಲಿಯಲ್ಲಿ ಮಾಯಾವತಿ ಹೇಳಿದರು.

 ಪ್ರಧಾನಿ ಮೋದಿ ಅವರ ಚೌಕಿದಾರ್ ಅಭಿಯಾನ ಹಾಗೂ ಕಾಂಗ್ರೆಸ್‌ನ ನ್ಯಾಯ್ ಯೋಜನೆ ಕೇವಲ ರಾಜಕೀಯ ಪಕ್ಷಗಳ ನಾಟಕ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ‘ಚೌಕಿದಾರ್’ ನಾಟಕ ಬಿಜೆಪಿಯನ್ನು ಉಳಿಸದು ಎಂದು ಅವರು ಹೇಳಿದ್ದಾರೆ. ಕಾಂಗ್ರೆಸ್ ಮೇಲೆ ಕೂಡ ವಾಗ್ದಾಳಿ ನಡೆಸಿರುವ ಮಾಯಾವತಿ, ಕಾಂಗ್ರೆಸ್‌ನ ಆಡಳಿತ ತುಂಬ ತಪ್ಪು ನೀತಿಗಳೇ ತುಂಬಿಕೊಂಡಿದ್ದವು ಎಂದರು.

ನಮ್ಮ ಸರಕಾರ ಕನಿಷ್ಠ ಆದಾಯ ಬೆಂಬಲ ನೀಡುವ ಬದಲು ಬಡ ಜನರಿಗೆ ಉದ್ಯೋಗ ನೀಡಲಿದೆ. ಇಂದಿರಾ ಗಾಂಧಿ ಅವರು ಕೂಡ 20 ಅಂಶಗಳ ಕಾರ್ಯಕ್ರಮ ಮಾಡಿದ್ದರು. ಆದರೆ, ಅದು ತುಂಬಾ ಪರಿಣಾಮಕಾರಿಯಾಗಿತ್ತು ಎಂದು ಮಾಯಾವತಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News