ರಾಜಕೀಯ ಪೋಸ್ಟ್ ಅಪ್‌ಲೋಡ್ ಮಾಡಿದವನ ಮನೆ ಬಾಗಿಲಿಗೆ ಫೇಸ್‌ಬುಕ್ ತಂಡ !

Update: 2019-04-07 15:20 GMT

ಹೊಸದಿಲ್ಲಿ, ಎ. 8: ಭಾರತದಲ್ಲಿ ಫೇಸ್‌ಬುಕ್ ಈಗಾಗಲೇ ಚುನಾವಣೆ ಕಾವು ಎದುರಿಸುತ್ತಿದೆ. ರಾಜಕೀಯ ಅಂಶಗಳುಳ್ಳ ಪೋಸ್ಟ್‌ಗಳನ್ನು ವಾಸ್ತವವಾಗಿ ಅದೇ ವ್ಯಕ್ತಿ ಬರೆದಿದ್ದಾರೆಯೇ ಎಂದು ಪರಿಶೀಲಿಸಲು ಫೇಸ್‌ಬುಕ್ ತನ್ನ ಬಳಕೆದಾರರ ಮನೆಗಳಿಗೆ ಪ್ರತಿನಿಧಿಗಳನ್ನು ಕಳುಹಿಸಿಕೊಡುತ್ತಿದೆ.

ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಲಾದ ರಾಜಕೀಯ ಅಂಶಗಳುಳ್ಳ ಪೋಸ್ಟ್‌ಗೆ ಸಂಬಂಧಿಸಿ ಪೇಸ್‌ಬುಕ್ ಪ್ರತಿನಿಧಿಗಳು ಇತ್ತೀಚೆಗೆ ದಿಲ್ಲಿಯ ವ್ಯಕ್ತಿಯೋರ್ವನನ್ನು ಭೇಟಿಯಾಗಿ ಮಾಹಿತಿ ಪಡೆದುಕೊಂಡಿದ್ದಾರೆ.

‘‘ಪಾಸ್‌ಪೋರ್ಟ್ ಪರಿಶೀಲನೆಗೆ ಪೊಲೀಸರು ಮನೆ ಬಾಗಿಲಿಗೆ ಬಂದಂತೆ ಅವರು ಇಲ್ಲಿಗೆ ಬಂದಿದ್ದರು. ರಾಜಕೀಯ ಅಂಶಗಳುಳ್ಳ ಪೋಸ್ಟ್ ಅನ್ನು ನಾನೇ ಮಾಡಿದ್ದೇನೆಯೇ ಎಂಬುದನ್ನು ತಿಳಿದುಕೊಳ್ಳಲು ಅವರು ಪುರಾವೆಗಾಗಿ ನನ್ನ ಆಧಾರ್ ಕಾರ್ಡ್ ಹಾಗೂ ಇತರ ದಾಖಲೆಗಳನ್ನು ಕೇಳಿದರು.’’ ಎಂದು ಹೆಸರು ಹೇಳಲಿಚ್ಛಿಸದ ಫೇಸ್ ಬುಕ್ ಬಳಕೆದಾರ ಹೇಳಿದ್ದಾರೆ.

ಕೇವಲ ಪೋಸ್ಟ್ ಹಾಕಿರುವುದಕ್ಕೆ ಫೇಸ್‌ಬುಕ್ ಪ್ರತಿನಿಧಿಗಳು ತಮ್ಮ ಮನೆಗೆ ಬಂದಿರುವುದರಿಂದ ಬಳಕೆದಾರ ಆಘಾತಗೊಂಡಿದ್ದರು.

‘‘ಇದರಿಂದ ನನಗೆ ಆಘಾತವಾಯಿತು. ಸಾಮಾಜಿಕ ಜಾಲತಾಣವೊಂದರ ವೇದಿಕೆ ಈ ರೀತಿ ಮಾಡಲು ಹೇಗೆ ಸಾಧ್ಯ ?. ಬಳಕೆದಾರರ ಖಾಸಗಿತನದ ಎಲ್ಲಿದೆ ? ನಾನು ಇಂತಹ ಘಟನೆಯನ್ನು ಎಂದೂ ಕೇಳಿಲ್ಲ. ಇದು ಸರಕಾರದ ಅಣತಿಯಂತೆ ನಡೆಯುತ್ತಿದೆಯೇ ?’’ ಎಂದು ಬಳಕೆದಾರ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News