ಸಾಮಾಜಿಕ ಮಾಧ್ಯಮ ಖಾತೆ ನಿಷ್ಕ್ರಿಯಗೊಳಿಸಿ ಪರೀಕ್ಷೆಯ ಸಿದ್ಧತೆ: ಯುಪಿಎಸ್ಸಿ 5ನೇ ಟಾಪರ್ ಸೃಷ್ಟಿ ದೇಶ್‌ಮುಖ್
ಹೊಸದಿಲ್ಲಿ, ಎ.7: ಅಧ್ಯಯನ ವಿಷಯಗಳಿಗಾಗಿ ಆನ್‌ಲೈನ್ ಅನ್ನು ಅವಲಂಬಿಸಿದ್ದೆ. ಆದರೆ ಪೂರ್ವಸಿದ್ಧತೆಗೂ ಮುನ್ನ ನನ್ನ ಎಲ್ಲಾ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿಷ್ಕ್ರಿಯಗೊಳಿಸಿದ್ದೆ ಎಂದು ಯುಪಿಎಸ್ಸಿ ಮಹಿಳೆಯರ ವಿಭಾಗದ ಟಾಪರ್ ಸೃಷ್ಟಿ ಜಯಂತ್ ದೇಶ್‌ಮುಖ್ ಹೇಳಿದ್ದಾರೆ. ಸಮಾಜಶಾಸ್ತ್ರವನ್ನು ಐಚ್ಛಿಕ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡಿದ್ದ 23 ವರ್ಷದ ಸೃಷ್ಟಿ ಈ ಬಾರಿಯ ಯುಪಿಎಸ್ಸಿ ಪರೀಕ್ಷೆಯಲ್ಲಿ 5ನೇ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
“ಕೋಚಿಂಗ್ ಕ್ಲಾಸ್‌ಗೂ ಹೋಗುತ್ತಿದ್ದೆ. ಆದರೆ ಅದನ್ನೇ ನೆಚ್ಚಿಕೊಂಡಿರಲಿಲ್ಲ. ದಿನಕ್ಕೆ 6ರಿಂದ 7 ಗಂಟೆ ಅಧ್ಯಯನ ನಡೆಸುತ್ತಿದ್ದೆ ಮತ್ತು ಆನ್‌ಲೈನ್‌ನ ಅಧ್ಯಯನ ವಿಷಯವನ್ನು ಗಮನಿಸುತ್ತಿದೆ. ಕಳೆದ ಬಾರಿಯ ಪ್ರಶ್ನೆ ಪತ್ರಿಕೆಗಳಿದಂದಲೂ ಅನುಕೂಲವಾಗಿದೆ” ಎಂದು ಸೃಷ್ಟಿ ಹೇಳಿದ್ದಾರೆ. ಸಂಗೀತವೆಂದರೆ ಇಷ್ಟ. ದಿನಾ ಯೋಗ ಮತ್ತು ಧ್ಯಾನ ನಡೆಸುತ್ತೇನೆ. ತನ್ನ ಸಾಧನೆಗೆ ಹೆತ್ತವರ ಸಹಕಾರ ಕಾರಣ ಎಂದು ಹೇಳುತ್ತಾರೆ.
ಮಧ್ಯಪ್ರದೇಶದ ಭೋಪಾಲದ ನಿವಾಸಿಯಾಗಿರುವ ಸೃಷ್ಟಿ, 2018ರಲ್ಲಿ ರಾಜೀವ್‌ಗಾಂಧಿ ಪ್ರದ್ಯೋಗಿಕಿ ವಿವಿಯಿಂದ ಕೆಮಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ.