ಹರ್ಯಾಣ, ಪಂಜಾಬ್‌ನಲ್ಲಿ ಕಾಂಗ್ರೆಸ್-ಆಪ್ ಮೈತ್ರಿ ಇಲ್ಲ

Update: 2019-04-07 16:20 GMT

ಹೊಸದಿಲ್ಲಿ, ಎ. 7: ಪಂಜಾಬ್ ಹಾಗೂ ಹರ್ಯಾಣದಲ್ಲಿ ಕಾಂಗ್ರೆಸ್-ಆಪ್ ಮೈತ್ರಿ ಇಲ್ಲ. ದಿಲ್ಲಿಯ ಬಗ್ಗೆ ಎರಡು ದಿನಗಳ ಒಳಗೆ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ ರವಿವಾರ ಹೇಳಿದ್ದಾರೆ.

ಎರಡೂ ಪಕ್ಷಗಳು ದಿಲ್ಲಿಯಲ್ಲಿ ಮಾತ್ರವಲ್ಲದೆ, ಹರ್ಯಾಣದಲ್ಲಿ ಕೂಡ ಮೈತ್ರಿ ಮಾಡಿಕೊಂಡಿವೆ ಎಂದು ಈ ವಾರದ ಆರಂಭದಲ್ಲಿ ವರದಿಯಾಗಿತ್ತು.

ಹರ್ಯಾಣ ಹಾಗೂ ಪಂಜಾಬ್‌ನಲ್ಲಿ ಪ್ರಮುಖ ವಿಪಕ್ಷವಾಗಿರುವ ಆಪ್ ಈ ಎರಡು ರಾಜ್ಯಗಳಲ್ಲಿ ಮೈತ್ರಿ ವಿಸ್ತರಿಸುವಂತೆ ಕಾಂಗ್ರೆಸ್ ಅನ್ನು ಕೋರಿದೆ ಎಂದು ಈ ವಾರದ ಆರಂಭದಲ್ಲಿ ವರದಿಯಾಗಿತ್ತು.

ದಿಲ್ಲಿಯಲ್ಲಿ 7 ಲೋಕಸಭಾ ಸ್ಥಾನಗಳಿವೆ, ಹರ್ಯಾಣದಲ್ಲಿ 10 ಚುನಾಯಿತ ಸಂಸತ್ ಸದಸ್ಯರಿದ್ದಾರೆ. ದಿಲ್ಲಿ ಹಾಗೂ ಹರ್ಯಾಣದಲ್ಲಿ ಮೇ 12ರಂದು ಹಾಗೂ ಪಂಜಾಬ್‌ನಲ್ಲಿ ಮೇ 19ರಂದು ಮತದಾನ ನಡೆಯಲಿದೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ದೇಶದಲ್ಲಿ ಮೈತ್ರಿ ಮಾಡಿಕೊಳ್ಳುವಲ್ಲಿ ಪಕ್ಷ ಮುಕ್ತವಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆ ನೀಡಿದ ಎರಡು ದಿನಗಳ ಬಳಿಕ ಈ ಬೆಳವಣಿಗೆ ನಡೆದಿದೆ.

ತನ್ನ ಪ್ರಣಾಳಿಕೆಯಲ್ಲಿ ತಿದ್ದುಪಡಿ ಮಾಡಲು ಹಾಗೂ ಅಧಿಕಾರಕ್ಕೆ ಬಂದರೆ, ಎನ್‌ಡಿಎಂಸಿ ಪ್ರದೇಶಗಳನ್ನು ಹೊರತುಪಡಿಸಿ ದಿಲ್ಲಿ ಪೂರ್ಣ ರಾಜ್ಯದ ಸ್ಥಾನಮಾನ ನೀಡುವುದಕ್ಕೆ ಕಾಂಗ್ರೆಸ್ ಒಪ್ಪಿಕೊಂಡಿದೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News