ಐಐಟಿ ಕಾನ್ಪುರದಲ್ಲಿ ಜಾತಿ ಅಸಮಾನತೆ, ಕಿರುಕುಳದ ವಿರುದ್ಧ ಧ್ವನಿಯೆತ್ತಿದ 400 ಶಿಕ್ಷಣತಜ್ಞರು

Update: 2019-04-07 16:55 GMT

ಹೊಸದಿಲ್ಲಿ,ಎ.7: ಕಾನ್ಪುರದ ಭಾರತೀಯ ತಾಂತ್ರಿಕ ಸಂಸ್ಥೆಯಲ್ಲಿ ಸಹಾಯಕ ಉಪನ್ಯಾಸಕರಾಗಿರುವ ಸುಬ್ರಮಣ್ಯಮ್ ಸಂದೆರ್ಲಾ ಅವರ ಜಾತಿನಿಂದನೆ ಮತ್ತು ಸಾಂಸ್ಥಿಕ ಕಿರುಕುಳವನ್ನು 16 ದೇಶಗಳ 400 ಶಿಕ್ಷಣತಜ್ಞರು ಖಂಡಿಸಿದ್ದಾರೆ. 

ಸದೆರ್ಲಾಗೆ ನೀಡಿರುವ ಪಿಎಚ್‌ಡಿ ಪದವಿಯನ್ನುಕೃತಿಚೌರ್ಯ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ರದ್ದಗೊಳಿಸುವ ಸಾಧ್ಯತೆಯಿದೆ ಎಂದು ಮಾರ್ಚ್ 14ರಂದು ಐಐಟಿ ಕಾನ್ಪುರ ತಿಳಿಸಿತ್ತು.ಸದೆರ್ಲಾರಿಗೆ ನೀಡಿರುವ ಪಿಎಚ್‌ಡಿಯನ್ನು ರದ್ದುಗೊಳಿಸಲು ಯಾವುದೇ ಕಾರಣವಿಲ್ಲ ಎಂದು ಶೈಕ್ಷಣಿಕ ಸಿದ್ಧಾಂಥ ವಿಭಾಗ ತಿಳಿಸಿದ್ದರೂವಿಶ್ವವಿದ್ಯಾನಿಲಯದ ಸೆನೆಟ್ ಸದೆರ್ಲಾರ ಪಿಎಚ್‌ಡಿ ರದ್ದುಗೊಳಿಸುವಂತೆ ಸಲಹೆ ನೀಡಿತ್ತು.

ಈ ನಿರ್ಧಾರ ಅನೇಕ ಕಾರಣಗಳಿಂದಾಗಿ ಎಲ್ಲರಹುಬ್ಬೇರುವಂತೆ ಮಾಡಿತ್ತು. ನಾಲ್ವರು ಹಿರಿಯ ಶಿಕ್ಷಕರು ವಿಶ್ವವಿದ್ಯಾನಿಲಯದ ವರ್ತನೆ ಕಾನೂನುಗಳು ಮತ್ತು ಎಸ್ಸಿಎಸ್ಟಿ ದೌರ್ಜನ್ಯ ತಡೆಕಾಯ್ದೆಯನ್ನು ಉಲ್ಲಂಘಿಸಿದ್ದಾರೆ ಎಂದು ನಿವೃತ್ತ ನ್ಯಾಯಾಧೀಶರು ನಡೆಸಿದ ತನಿಖೆಯ ವೇಳೆ ಕಂಡುಬಂದ ಎರಡು ತಿಂಗಳ ನಂತರ ಈ ಘಟನೆನಡೆದಿದೆ. ಈ ಘಟನೆಯಲ್ಲಿ ನಾಲ್ವರು ಶಿಕ್ಷಕರು, ಎಹಸಾನ್ ಶರ್ಮಾ, ಸಂಜಯ್ ಮಿತ್ತಲ್, ರಾಜೀವ್ ಶೇಖರ್ ಮತ್ತು ಸಿ.ಎಸ್ ಉಪಾಧ್ಯಾಯ್ ಅವರುತಪ್ಪಿತಸ್ಥರು ಎಂದು ತೀರ್ಪು ನೀಡಲಾಗಿತ್ತು. 
ತಾನು ಮೀಸಲಾತಿಯಿಂದ ಲಾಭಪಡೆದುಕೊಂಡಿದ್ದೇನೆ ಮತ್ತು ಪ್ರಶ್ನೆಗಳಿಗೆ ಉತ್ತರಿಸುವಷ್ಟುಸಮರ್ಥನಿಲ್ಲ ಎಂದು ಉಪನ್ಯಾಸಕರು ಮತ್ತು ಇತರರು ನಕಲಿ ಸುದ್ದಿಯನ್ನು ಹರಡುತ್ತಿದ್ದಾರೆ ಎಂದು ಸದೆರ್ಲಾ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News