ವಾಟ್ಸ್‌ಆ್ಯಪ್‌ನಲ್ಲಿನ್ನು ‘ಫ್ರೀಕ್ವೆಂಟ್ಲಿ ಫಾರ್‌ವರ್ಡೆಡ್’ ಸಂದೇಶಗಳನ್ನು ಬ್ಲಾಕ್ ಮಾಡಬಹುದು

Update: 2019-04-07 17:21 GMT

ಹೊಸದಿಲ್ಲಿ,ಎ.7: ವಾಟ್ಸ್‌ಆ್ಯಪ್ ತನ್ನ ವೇದಿಕೆಯಲ್ಲಿ ಸುಳ್ಳುಸುದ್ದಿಗಳು ಮತ್ತು ತಪ್ಪುಮಾಹಿತಿಗಳ ವಿರುದ್ಧದ ಸಮರವನ್ನು ತೀವ್ರಗೊಳಿಸಿದೆ. ಗುಂಪುಬಳಕೆದಾರರಿಗಾಗಿ ಹೊಸ ಪ್ರೈವೆಸಿ ಸೆಟಿಂಗ್‌ಗಳನ್ನು ಇತ್ತೀಚಿಗಷ್ಟೇ ಪರಿಚಯಿಸಿರುವ ವಾಟ್ಸ್‌ಆ್ಯಪ್ ಈಗ ಗುಂಪುಗಳಿಗಾಗಿ ಹೊಸ ಫೀಚರ್‌ವೊಂದನ್ನುಪರೀಕ್ಷೆಗೊಳಪಡಿಸಿದೆ. ಈ ಫೀಚರ್ ‘ಫ್ರೀಕ್ವೆಂಟ್ಲಿ ಫಾರ್‌ವರ್ಡೆಡ್’ ಸಂದೇಶಗಳನ್ನು ಬ್ಲಾಕ್ ಮಾಡಲು ಬಳಕೆದಾರರಿಗೆ ನೆರವಾಗಲಿದೆ.

ಸಂದೇಶವೊಂದು ಎಷ್ಟು ಬಾರಿ ಫಾರ್‌ವರ್ಡ್ ಆಗಿದೆ ಎನ್ನುವುದನ್ನು ನಿರ್ಧರಿಸಲು ತನ್ನ ಬಳಕೆದಾರರಿಗೆ ನೆರವಾಗಲು ವಾಟ್ಸ್‌ಆ್ಯಪ್ ಈಗಾಗಲೇಎರಡು ಹೊಸ ಫೀಚರ್‌ಗಳನ್ನು ಆರಂಭಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವುದು ಗಮನೀಯವಾಗಿದೆ. ‘ಫಾರ್ವರ್ಡಿಂಗ್ ಇನ್ಫೋ’ ಮತ್ತು ‘ಫ್ರೀಕ್ವೆಂಟ್ಲಿ ಫಾರ್‌ವರ್ಡೆಡ್’ ಎಂಬ ನೂತನ ಫೀಚರ್‌ಗಳನ್ನು ಅಂತಿಮ ಬಳಕೆದಾರರಿಗಾಗಿ ಇನ್ನೂ ಬಿಡುಗಡೆಗೊಳಿಸಿಲ್ಲವಾದರೂ,ಇತ್ತೀಚಿನ ಬೆಟಾಆವೃತ್ತಿಗಲ್ಲಿ ಇವು ಕಾಣಿಸಿಕೊಂಡಿವೆ.

 ಆಂಡ್ರಾಯ್ಡ್ ಗಾಗಿಮುಂದಿನ ಬೆಟಾ ಆವೃತ್ತಿಯು ಗುಂಪಿನಲ್ಲಿ ‘ಫ್ರೀಕ್ವೆಂಟ್ಲಿ ಫಾರ್‌ವರ್ಡೆಡ್’ ಸಂದೇಶಗಳನ್ನು ಬ್ಲಾಕ್ ಮಾಡಲು ಬಳಕೆದಾರರಿಗೆಅವಕಾಶವನ್ನು ಕಲ್ಪಿಸುವ ಹೊಸ ಸೆಟಿಂಗ್‌ನೊಂದಿಗೆ ಬರಲಿದೆ ಎಂದು ವಾಟ್ಸ್‌ಆ್ಯಪ್ ಅಪ್‌ಡೇಟ್‌ಗಳ ಮೇಲೆ ಕಣ್ಣಿಡುವ ಡಬ್ಲುಎ ಬೆಟಾ ಇನ್ಫೋಡಾಟ್ ಕಾಮ್ ಜಾಲತಾಣವು ತಿಳಿಸಿದೆ.

ಹೊಸ ಪ್ರೈವೆಸಿ ಸೆಟಿಂಗ್‌ನ್ನು ಗ್ರೂಪ್ ಅಡ್ಮಿನ್‌ಗಳು ಮಾತ್ರ ನೋಡಬಹುದು ಮತ್ತು ‘ಫ್ರೀಕ್ವೆಂಟ್ಲಿ ಫಾರ್‌ವರ್ಡೆಡ್’ಲೇಬಲ್‌ಗಳೊಂದಿಗೆ ಬರುವಸಂದೇಶಗಳನ್ನು ಬ್ಲಾಕ್ ಮಾಡಬಹುದು ಎನ್ನುವುದನ್ನು ಗಮನಿಸಬೇಕಿದೆ. ಈ ಫೀಚರ್ ಕ್ರಿಯಾಶೀಲಗೊಳ್ಳುವುದರೊಂದಿಗೆ ಇಂತಹಸಂದೇಶಗಳನ್ನು ರವಾನಿಸಲು ವಾಟ್ಸ್‌ಆ್ಯಪ್ ಗುಂಪಿನ ಯಾವುದೇ ಸದಸ್ಯರಿಗೆ ಸಾಧ್ಯವಾಗುವುದಿಲ್ಲ.

ಹೊಸ ಫೀಚರ್ ತಪ್ಪುಮಾಹಿತಿಗಳ ಪ್ರಸಾರವನ್ನು ತಡೆಯಲು ವಾಟ್ಸ್‌ಆ್ಯಪ್‌ಗೆ ನೆರವಾಗಬಹುದಾದರೂ,ಅದು ಸಂಪೂರ್ಣವಾಗಿದೋಷಮುಕ್ತವಾಗಿಲ್ಲ. ಉದಾಹರಣೆಗೆ ಬಳಕೆದಾರನೋರ್ವ ‘ಫ್ರೀಕ್ವೆಂಟ್ಲಿ ಫಾರ್‌ವರ್ಡೆಡ್’ ಸಂದೇಶವೊಂದನ್ನು ಕಟ್ ಆ್ಯಂಡ್ ಪೇಸ್ಟ್ ಮಾಡಿಅದನ್ನು ನೂತನ ಸಂದೇಶವನ್ನಾಗಿ ರವಾನಿಸಬಹುದು. ಸಂದೇಶವೊಂದನ್ನು ನಾಲ್ಕಕ್ಕಿಂತ ಹೆಚ್ಚು ಸಲ ಫಾರ್‌ವರ್ಡ್ ಮಾಡಿದಾಗ ‘ಫ್ರೀಕ್ವೆಂಟ್ಲಿಫಾರ್‌ವರ್ಡೆಡ್’ ಲೇಬಲ್ ಕಾಣಿಸಿಕೊಳ್ಳುತ್ತದೆ. ಸದ್ಯ ಸಂದೇಶವೊಂದನ್ನು ಐದು ಚಾಟ್‌ಗಳವರೆಗೆ ಫಾರ್‌ವರ್ಡ್ ಮಾಡಲು ವಾಟ್ಸ್‌ಆ್ಯಪ್ ಅವಕಾಶನೀಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News