×
Ad

ಮಹಿಳೆಯರ ವಿರುದ್ಧ ಅಪರಾಧ ನಡೆಸಲು ಕ್ರಮ: ನಗೆಪಾಟಲಿಗೀಡಾದ ಬಿಜೆಪಿಯ ಆಶ್ವಾಸನೆ

Update: 2019-04-08 21:31 IST

ಹೊಸದಿಲ್ಲಿ, ಎ.8: 2019ರ ಲೋಕಸಭಾ ಚುನಾವಣೆಗಾಗಿ ಪ್ರಣಾಳಿಕೆ ಬಿಡುಗಡೆಗೊಳಿಸಿದ ಬಿಜೆಪಿಯು ಪ್ರಮಾದವೊಂದರಿಂದ ಮುಜುಗರಕ್ಕೊಳಗಾಗಿದೆ.

ಈ ಎಡವಟ್ಟನ್ನು ಟ್ವೀಟ್ ಮಾಡಿರುವ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ, “ಬಿಜೆಪಿ ಪ್ರಣಾಳಿಕೆಯಲ್ಲಿ ಕನಿಷ್ಠ ಪಕ್ಷ ಅವರ ನೈಜ ಉದ್ದೇಶ ಪ್ರತಿಬಿಂಬಿತವಾಗಿದೆ” ಎಂದಿದೆ.

“ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಗೃಹ ಸಚಿವಾಲಯದಲ್ಲಿ ನಾವು ಮಹಿಳಾ ಸುರಕ್ಷತಾ ವಿಭಾಗವನ್ನು ರಚಿಸಿದ್ದೇವೆ. ಮಹಿಳೆಯರ ವಿರುದ್ಧ ಅಪರಾಧಗಳನ್ನು ನಡೆಸುವುದಕ್ಕಾಗಿ ಕಾನೂನುಗಳನ್ನು ವರ್ಗಾಯಿಸಲು ಕಠಿಣ ಕ್ರಮಗಳನ್ನು ಕೈಗೊಂಡಿದ್ದೇವೆ” ಎಂದು ಬರೆಯಲಾಗಿರುವ ಬಿಜೆಪಿಯ ಪ್ರಣಾಳಿಕೆಯ ಆಶ್ವಾಸನೆಯನ್ನು ಕಾಂಗ್ರೆಸ್ ಟ್ವೀಟ್ ಮಾಡಿದೆ.

43 ಪುಟಗಳ ಬಿಜೆಪಿ ಪ್ರಣಾಳಿಕೆಯ 30ನೆ ಪುಟದಲ್ಲಿ ‘ಮಹಿಳಾ ಸಬಲೀಕರಣ’ ವಿಭಾಗದಲ್ಲಿ ಈ ಎಡವಟ್ಟು ನಡೆದಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಆಪ್, “ಮಹಿಳೆಯರ ವಿರುದ್ಧ ಅಪರಾಧ ನಡೆಸಲು ಬಿಜೆಪಿಯ ಸಂಕಲ್ಪ” ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News