ವಿಶ್ವದ ಅತಿ ಗಿಡ್ಡ ಮಹಿಳೆ ಜ್ಯೋತಿಯಿಂದ ಮತದಾನ

Update: 2019-04-11 08:20 GMT

 ನಾಗ್ಪುರ, ಎ.11: ವಿಶ್ವದ ಅತಿ ಗಿಡ್ಡ ಮಹಿಳೆ, ನಟಿ ಹಾಗೂ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿರುವ ಜ್ಯೋತಿ ಅಮ್ಗೆ ನಾಗ್ಪುರದಲ್ಲಿ ಗುರುವಾರ ನಡೆದ ಲೋಕಸಭಾ ಚುನಾವಣೆಯಲ್ಲಿ ಮತ ಕೇಂದ್ರಕ್ಕೆ ತೆರಳಿ ಮತದಾನ ಮಾಡುವ ಮೂಲಕ ಎಲ್ಲರ ಗಮನ ತನ್ನತ್ತ ಸೆಳೆದಿದ್ದಾರೆ.

2 ಅಡಿ, 1 ಇಂಚು ಎತ್ತರದ 25ರ ಹರೆಯದ ಜ್ಯೋತಿ ತಾಳ್ಮೆಯಿಂದ ಸರದಿ ಸಾಲಿನಲ್ಲಿ ನಿಂತು ತನ್ನ ಮತದಾನದ ಹಕ್ಕು ಚಲಾಯಿಸಿದರು.

‘‘ಎಲ್ಲರೂ ಮತ ಹಾಕುವಂತೆ ನಾನು ವಿನಂತಿಸುವೆ. ದಯವಿಟ್ಟು ಮೊದಲಿಗೆ ಮತ ಚಲಾಯಿಸಿ, ಆ ಬಳಿಕ ನಿಮ್ಮ ಎಲ್ಲ ಕೆಲಸವನ್ನು ಮಾಡಿ ಮುಗಿಸಿ’’ ಎಂದು ತನ್ನ ಕೈಬೆರಳಿಗೆ ಹಾಕಿರುವ ಶಾಯಿಯನ್ನು ಪ್ರದರ್ಶಿಸುತ್ತಾ ಅಮ್ಗೆ ಸುದ್ದಿಗಾರರಿಗೆ ತಿಳಿಸಿದರು.

ಆರನೇ ಆವೃತ್ತಿಯ ಬಿಗ್ ಬಾಸ್‌ನಲ್ಲಿ ಭಾಗವಹಿಸಿರುವ ಸೆಲೆಬ್ರಿಟಿ ಕುಕ್ ಹಾಗೂ ವಾಣಿಜ್ಯೋದ್ಯಮಿ ಜ್ಯೋತಿ ಅಮೆರಿಕ ಹಾಗೂ ಇಟಲಿಯ ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಪುಣೆಯ ಲೋನಾವಾಲಾದಲ್ಲಿರುವ ಗಣ್ಯರ ಮೇಣದ ಮ್ಯೂಸಿಯಂನಲ್ಲಿ ಜ್ಯೋತಿಯ ಪ್ರತಿಮೆ ಕೂಡ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News