ಮತಗಟ್ಟೆ ಸಮೀಪ ಐಇಡಿ ಸ್ಫೋಟ

Update: 2019-04-11 15:58 GMT

ಮುಂಬೈ, ಎ. 11: ಮಹಾರಾಷ್ಟ್ರದ ಗಡ್ಚಿರೋಳಿ ಜಿಲ್ಲೆಯಲ್ಲಿರುವ ಮತಗಟ್ಟೆಯೊಂದರ ಸಮೀಪ ನಕ್ಸಲರು ಬುಧವಾರ ಐಇಡಿ ಸ್ಫೋಟ ನಡೆಸಿದ್ದಾರೆ. ಈ ಸಂದರ್ಭ ಮತದಾನ ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

  ಲೋಕಸಭಾ ಚುನಾವಣೆಗೆ ಮತ ಚಲಾಯಿಸಲು ಮತದಾರರು ಸರತಿ ಸಾಲಿನಲ್ಲಿ ನಿಂತಿದ್ದ ಸಂದರ್ಭ ಮತಗಟ್ಟೆಯಿಂದ ಸುಮಾರು 150 ಮೀಟರ್ ದೂರದ ವೆಝರಿ ಪ್ರದೇಶದಲ್ಲಿ ಬೆಳಗ್ಗೆ 10.30ಕ್ಕೆ ಐಇಡಿ ಸ್ಫೋಟ ಸಂಭವಿಸಿತು. ಆದರೆ, ಯಾರಿಗೂ ಗಾಯಗಳಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

  ಪೊಲೀಸರು ಹಾಗೂ ಸಿಆರ್‌ಪಿಎಫ್ ಸಿಬ್ಬಂದಿಯ ಬೆಂಗಾವಲಿನಲ್ಲಿ ಚುನಾವಣಾ ಸಿಬ್ಬಂದಿ ಬುಧವಾರ ಮತಗಟ್ಟೆಯತ್ತ ತೆರಳುತ್ತಿದ್ದಾಗ ಜಿಲ್ಲೆಯ ಇಟಪಲ್ಲಿ ತಾಲೂಕಿನ ಗಟ್ಟ ಜಾಂಬಿಯಾ ಗ್ರಾಮದಲ್ಲಿ ನಕ್ಸಲರು ಐಇಡಿ ಸ್ಫೋಟ ನಡೆಸಿದ್ದರು.

 ಈ ಘಟನೆಯಲ್ಲಿ ಸಿಆರ್‌ಪಿಎಫ್ ಯೋಧನೋರ್ವ ಗಾಯಗೊಂಡಿದ್ದ. ದೊಡ್ಡ ಸಂಖ್ಯೆಯ ಮತದಾರರಿರುವ ಈ ಗ್ರಾಮದ ಜನರಲ್ಲಿ ಭೀತಿ ಹುಟ್ಟಿಸಲು ಹಾಗೂ ಚುನಾವಣಾ ಪ್ರಕ್ರಿಯೆಗೆ ಅಡ್ಡಿ ಉಂಟು ಮಾಡಲು ನಕ್ಸಲರು ಪ್ರಯತ್ನಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News