ಇವಿಎಂನ ಕಾಂಗ್ರೆಸ್ ಬಟನ್ ಕೆಲಸ ಮಾಡುತ್ತಿಲ್ಲ: ವಿಡಿಯೋ ಟ್ವೀಟ್ ಮಾಡಿದ ಒಮರ್ ಅಬ್ದುಲ್ಲಾ

Update: 2019-04-11 11:31 GMT

ಜಮ್ಮು, ಎ.11: ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ಇಂದು ಆರಂಭವಾಗಿದ್ದು, ಅಲ್ಲಲ್ಲಿ ಇವಿಎಂ ಸಮಸ್ಯೆಗಳ ಬಗ್ಗೆ ವರದಿಯಾಗಿದೆ. ಜಮ್ಮು ಕಾಶ್ಮೀರದ ಪೂಂಚ್ ನಲ್ಲಿ ಇವಿಎಂನಲ್ಲಿರುವ ಕಾಂಗ್ರೆಸ್ ಬಟನ್ ಕೆಲಸ ಮಾಡುತ್ತಿಲ್ಲ. ಇಂತಹ ಸಮಸ್ಯೆ ರಾಜ್ಯಾದ್ಯಂತ 6 ಬೂತ್ ಗಳಲ್ಲಿ ಕಾಣಿಸಿಕೊಂಡಿದೆ ಎಂಬ ವರದಿಯೊಂದನ್ನು ನ್ಯಾಶನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.

ಮತದಾನದ ಬೂತ್ ನಲ್ಲಿರುವ ಅಧಿಕಾರಿಯೊಬ್ಬರು ಜನರನ್ನು ಸಮಾಧಾನ ಪಡಿಸುತ್ತಿರುವ ವಿಡಿಯೊವೊಂದು ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ. ಮತದಾನ ವಿಳಂಬಕ್ಕೆ ಸಂಬಂಧಿಸಿ ಮತದಾರರು ಆಕ್ರೋಶ ವ್ಯಕ್ತಪಡಿಸುತ್ತಿರುವ ವಿಡಿಯೋ ಇದಾಗಿದ್ದು, ಈ ವಿಡಿಯೋ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

“ಇಲ್ಲಿ ಸಿಬ್ಬಂದಿಯ ಕೊರತೆಯಿದೆ. ಬಟನ್ ಕೆಲಸ ಮಾಡದ ಕಾರಣ ಮತದಾನ ವಿಳಂಬವಾಗಿದೆ. ಬೇರೇನೂ ಸಮಸ್ಯೆಯಿಲ್ಲ. ಒಂದು ಬಟನ್ ಮಾತ್ರ ಯಾಕೆ ಕೆಲಸ ಮಾಡುತ್ತಿಲ್ಲ ಎಂದು ಹೇಳಲು ನಮ್ಮಿಂದಾಗದು” ಎಂದು ಅಧಿಕಾರಿ ಹೇಳುವುದು ವಿಡಿಯೋದಲ್ಲಿ ಕೇಳಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News