ಎ.15ರೊಳಗೆ ರಾಂಚಿ ನ್ಯಾಯಾಲಯಕ್ಕೆ ಶರಣಾಗಲು ಮಾಜಿ ಜಾರ್ಖಂಡ್ ಸಚಿವನಿಗೆ ಸುಪ್ರೀಂ ನಿರ್ದೇಶ

Update: 2019-04-12 15:06 GMT

ಹೊಸದಿಲ್ಲಿ,ಎ.12: ದಂಗೆ ಮತ್ತು ಹಿಂಸಾಚಾರಕ್ಕೆ ಪ್ರಚೋದನೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಎ.15ರೊಳಗೆ ರಾಂಚಿಯಲ್ಲಿಯ ನ್ಯಾಯಾಲಯಕ್ಕೆ ಶರಣಾಗುವಂತೆ ಜಾರ್ಖಂಡ್‌ನ ಮಾಜಿ ಸಚಿವ ಯೋಗೇಂದ್ರ ಸಾವ್ ಅವರಿಗೆ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ನಿರ್ದೇಶ ನೀಡಿದೆ.

ತನ್ನ ಕಕ್ಷಿದಾರರು ರಾಂಚಿಯಲ್ಲಿನ ಸಂಬಂಧಿತ ವಿಚಾರಣಾ ನ್ಯಾಯಾಲಯದೆದುರು ಶರಣಾಗುತ್ತಾರೆ ಎಂದು ತಿಳಿಸಿದ ಸಾವ್ ಪರ ವಕೀಲರು,ಸರ್ವೋಚ್ಚ ನ್ಯಾಯಾಲಯದ ಆದೇಶಕ್ಕನುಸಾರವಾಗಿ ಪ್ರಕರಣದ ಎಲ್ಲ ದಾಖಲೆಗಳನ್ನು ರಾಂಚಿಗೆ ವರ್ಗಾಯಿಸಲಾಗಿದೆ ಎಂದರು. ತಾನು ಶರಣಾಗಬೇಕಾದ ಸ್ಥಳದ ಬಗ್ಗೆ ಸ್ಪಷ್ಟನೆ ಕೋರಿ ಸಾವ್ ಸಲ್ಲಿಸಿದ್ದ ಅರ್ಜಿಯ ಕುರಿತು ನ್ಯಾ.ಎಸ್.ಎ.ಬೋಬ್ಡೆ ಅವರು ಈ ನಿರ್ದೇಶ ನೀಡಿದರು.

ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡಲು ಅನುಮತಿ ಕೋರಿ ಸಾವ್ ಸಲ್ಲಿಸಿದ್ದ ಅರ್ಜಿಯನ್ನು ಎ.4ರಂದು ತಿರಸ್ಕರಿಸಿದ್ದ ಸರ್ವೋಚ್ಚ ನ್ಯಾಯಲಯವು ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರ ಜಾಮೀನನ್ನು ರದ್ದುಗೊಳಿಸಿತ್ತು.

2013ರಲ್ಲಿ ಹೇಮಂತ ಸೋರೇನ್ ನೇತೃತ್ವದ ಯುಪಿಎ ಸರಕಾರದಲ್ಲಿ ಸಚಿವರಾಗಿದ್ದ ಸಾವ್,ಡಝನ್ನಿಗೂ ಅಧಿಕ ದಂಗೆ ಮತ್ತು ಹಿಂಸಾಚಾರಕ್ಕೆ ಪ್ರಚೋದನೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ.

  ಪಿಲಿಭಿತ್ ಲೋಕಸಭಾ ಕ್ಷೇತ್ರದಿಂದ ಆರು ಬಾರಿ ಗೆದ್ದಿರುವ ಗಾಂಧಿ ಈ ಬಾರಿ ಅದನ್ನು ಸುಲ್ತಾನ್‌ಪುರದ ಹಾಲಿ ಸಂಸದ ಹಾಗೂ ಪುತ್ರ ವರುಣ ಗಾಂಧಿ ಅವರಿಗೆ ಬಿಟ್ಟುಕೊಟ್ಟಿದ್ದಾರೆ ಮತ್ತು ಸುಲ್ತಾನ್‌ಪುರದಿಂದ ತಾನು ಸ್ಪರ್ಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News