ಪರಮ ದೇಶಭಕ್ತ ಅಕ್ಷಯ್ ಕುಮಾರ್ ಮತದಾನ ಮಾಡಲು ಸಾಧ್ಯವಿಲ್ಲ ಯಾಕೆ?

Update: 2019-04-12 17:30 GMT

ದೇಶವು ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿದ್ದು, ದೇಶದ ಎಲ್ಲಾ ಪ್ರಜೆಗಳು ತಮ್ಮ ಹಕ್ಕನ್ನು ಚಲಾಯಿಸಲು ಸಿದ್ಧರಾಗಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳೂ ಜನರು ಮತದಾನ ಮಾಡುವಂತೆ ಪ್ರೇರೇಪಿಸುತ್ತಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಸದಾ ದೇಶಭಕ್ತರಾಗಿರುವ ಅಕ್ಷಯ್ ಕುಮಾರ್ ಪ್ರತಿವರ್ಷ ಮತದಾನದಿಂದ ತಪ್ಪಿಸಿಕೊಳ್ಳುತ್ತಾರೆ ಎಂದರೆ ನಂಬಲೇಬೇಕು..!

ಈ ‘ದೇಶಭಕ್ತ’ ನಟ ಕೆನಡಾದ ಪಾಸ್ ಪೋರ್ಟ್ ಹೊಂದಿದ್ದು, ಭಾರತದಲ್ಲಿ ಮತದಾನ ಮಾಡುವ ಹಕ್ಕನ್ನು ಹೊಂದಿಲ್ಲ. ಪಂಜಾಬ್ ನ ಅಮೃತಸರದಲ್ಲಿ ಜನಿಸಿದ ಅಕ್ಷಯ್ ಕುಮಾರ್ ದಿಲ್ಲಿಯಲ್ಲಿ ಬೆಳೆದರು. ಬಾಲಿವುಡ್ ಸ್ಟಾರ್ ಆಗುವುದಕ್ಕೆ ಮೊದಲು ಬ್ಯಾಂಕಾಕ್ ನಲ್ಲಿ ಅವರು ಮಾರ್ಷಲ್ ಆರ್ಟ್ಸ್ ತರಬೇತಿ ಪಡೆಯುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲಿ ಮತ್ತು ಸಿನೆಮಾಗಳಲ್ಲಿ ‘ದೇಶಭಕ್ತ’ನಾಗುವ ಯಾವುದೇ ಅವಕಾಶವನ್ನು ತಪ್ಪಿಸದ ಅಕ್ಷಯ್ ಹೊಂದಿರುವುದು ಕೆನಡಾದ ಪಾಸ್ ಪೋರ್ಟನ್ನು. ಇದೇ ಕಾರಣಕ್ಕಾಗಿ ಅವರು ಭಾರತದ ಪೌರತ್ವವನ್ನು ತೊರೆದರು. ಇದೇ ಕಾರಣಕ್ಕಾಗಿ ಅವರಿಗೆ ಭಾರತದ ಚುನಾವಣೆಯಲ್ಲಿ ಮತದಾನ ಮಾಡಲು ಸಾಧ್ಯವಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News