ಕ್ರಿಸ್ಟಿಯನ್ ಗ್ಯಾರಿನ್ ಫೈನಲ್‌ಗೆ

Update: 2019-04-15 01:46 GMT

ಹ್ಯೂಸ್ಟನ್, ಎ.14: ಎಂಟನೇ ಶ್ರೇಯಾಂಕದ ಸ್ಯಾಮ್ ಕ್ವೆರ್ರಿ ಅವರನ್ನು ಮಣಿಸಿದ ಚಿಲಿ ಆಟಗಾರ ಕ್ರಿಸ್ಟಿಯನ್ ಗ್ಯಾರಿನ್ ಹ್ಯೂಸ್ಟನ್‌ನಲ್ಲಿ ನಡೆಯುತ್ತಿರುವ ಯುಎಸ್ ಪುರುಷರ ಕ್ಲೇ ಕೋರ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ತಲುಪಿದ್ದಾರೆ. ಇದು ಅವರ ಎರಡನೇ ಎಟಿಪಿ ಟೂರ್ ಫೈನಲ್ ಆಗಿದೆ.

ಕ್ವೆರ್ರಿ ಯನ್ನು 7-6 (2), 6-2 ಸೆಟ್‌ಗಳಿಂದ ಮಣಿಸಿದ ಗ್ಯಾರಿನ್, ಫೈನಲ್ ಪಂದ್ಯದಲ್ಲಿ ನಾರ್ವೆಯ ಕ್ಯಾಸ್ಪರ್ ರೂಡ್‌ರನ್ನು ಎದುರಿಸಲಿದ್ದಾರೆ. ಟೂರ್ನಿಯ ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಕೊಲಂಬಿಯದ ಕ್ವಾಲಿಫೈಯರ್ ಆಟಗಾರ ಡೇನಿಯಲ್ ಇಲಾಹಿ ಗ್ಯಾಲನ್‌ರನ್ನು 7-5, 6-2ರಿಂದ ಸೋಲಿಸಿದ ಕ್ಯಾಸ್ಪರ್ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ಕ್ವೆರ್ರಿ ಕೊನೆಯ ಶ್ರೇಯಾಂಕದ ಆಟಗಾರನಾಗಿದ್ದರು. ಆದರೆ ಗ್ಯಾರಿನ್ ಅವರನ್ನು ಪ್ರಥಮ ಸೆಟ್‌ನಲ್ಲಿ ತಡೆಯಲು ಕ್ವೆರ್ರಿಗೆ ಸಾಧ್ಯವಾಗಲಿಲ್ಲ. 22 ವರ್ಷದ ಚಿಲಿ ಆಟಗಾರ ಗ್ಯಾರಿನ್ ಆರಂಭದಲ್ಲಿ ಎರಡು ಪಾಯಿಂಟ್ ಕಳೆದುಕೊಂಡು ಮೊದಲ ಸೆಟ್‌ನ್ನು 5-6ರಿಂದ ಸೋಲುವ ಭೀತಿಯಲ್ಲಿದ್ದರು. ಆದರೆ ಸರ್ವ್‌ನ್ನು ತಮ್ಮಲ್ಲೇ ಉಳಿಸಿಕೊಂಡ ಟೈಬ್ರೇಕರ್‌ವರೆಗೆ ಹೋದ ಸೆಟ್‌ನ್ನು ಗೆದ್ದುಕೊಂಡರು. 2ನೇ ಸೆಟ್‌ನಲ್ಲಿ 19ರ ಪೈಕಿ 16 ಸರ್ವಿಸ್ ಪಾಯಿಂಟ್‌ಗಳನ್ನು ಗಳಿಸಿದ ಗ್ಯಾರಿನ್ ಸಂಪೂರ್ಣ ಪ್ರಾಬಲ್ಯ ಮೆರೆದರು.

ಚಿಲಿ ಆಟಗಾರ ಕಳೆದ ತಿಂಗಳು ನಡೆದ ಬಾಸಿಲ್ ಓಪನ್‌ನಲ್ಲಿ ಮೊದಲ ಬಾರಿ ಎಟಿಪಿ ಟೂರ್ ಅಂತಿಮ ಪಂದ್ಯಕ್ಕೆ ಅರ್ಹತೆ ಪಡೆದ ಆಟಗಾರ ಎನಿಸಿದ್ದರು. ಈ ಟೂರ್ನಿಯ ಫೈನಲ್‌ನಲ್ಲಿ ಗೆದ್ದರೆ ಅವರು ಅವರು ರ್ಯಾಂಕಿಂಗ್‌ನಲ್ಲಿ ಅಗ್ರ 50ರ ಪಟ್ಟಿಯಲ್ಲಿ ಬರುವ ಸಾಧ್ಯತೆಯಿದೆ.

  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News