ಆಝಂ ಖಾನ್, ಮೇನಕಾ ಗಾಂಧಿಗೆ ಚುನಾವಣಾ ಪ್ರಚಾರಕ್ಕೆ ನಿಷೇಧ

Update: 2019-04-15 16:43 GMT

ಹೊಸದಿಲ್ಲಿ, ಎ.15: ಚುನಾವಣಾ ಪ್ರಚಾರದ ವೇಳೆ ವಿವಾದಾತ್ಮಕ ಹೇಳಿಕೆ ನೀಡುವ ರಾಜಕೀಯ ನಾಯಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಸುಪ್ರೀಂ ಕೋರ್ಟ್ ಸೂಚನೆಯ ನಂತರ ಇದೀಗ ಚುನಾವಣಾ ಪ್ರಚಾರದಿಂದ ಅಝಂ ಖಾನ್ ಮತ್ತು ಕೇಂದ್ರ ಸಚಿವ ಮೇನಕಾ ಗಾಂಧಿಗೆ ಚುನಾವಣಾ ಆಯೋಗವು ನಿಷೇಧ ಹೇರಿದೆ.

ಸಮಾಜವಾದಿ ಪಕ್ಷದ ನಾಯಕ ಅಝಂ ಖಾನ್ ರಿಗೆ ಚುನಾವಣಾ ಪ್ರಚಾರದಿಂದ 72 ಗಂಟೆಗಳ ಕಾಲ, ಮೇನಕಾ ಗಾಂಧಿಗೆ 48 ಗಂಟೆಗಳ ಕಾಲ ಚುನಾವಣಾ ಆಯೋಗ ನಿಷೇಧ ಹೇರಿದೆ. ಇದಕ್ಕೂ ಮೊದಲು ಆಯೋಗವು ಆದಿತ್ಯನಾಥ್ ಮತ್ತು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿಯವರಿಗೆ ನಿಷೇಧ ಹೇರಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News