ಪತ್ನಿ, ಮಕ್ಕಳಿಲ್ಲದ ಮೋದಿ ಕುಟುಂಬದ ಮಹತ್ವ ಅರಿಯಲು ಹೇಗೆ ಸಾಧ್ಯ: ಶರದ್ ಪವಾರ್
Update: 2019-04-17 19:18 IST
ಜಲ್ನಾ, ಎ.17: ಪತ್ನಿ ಮತ್ತು ಮಕ್ಕಳಿಲ್ಲದ ಕಾರಣ ಪ್ರಧಾನಿ ನರೇಂದ್ರ ಮೋದಿಯವರಿಗೆ ಕುಟುಂಬದ ಮಹತ್ವ ಅರಿಯಲು ಸಾಧ್ಯವಿಲ್ಲ ಎಂದು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದರು.
ಮಹಾರಾಷ್ಟ್ರದ ಜಲ್ನಾದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, “ಅವರ ಕುಟುಂಬದಲ್ಲಿ ಯಾರೂ ಇಲ್ಲ, ಒಂದು ಕುಟುಂಬ ಹೇಗೆ ನಡೆಯುತ್ತದೆ ಮತ್ತು ಒಬ್ಬರು ಪತ್ನಿ ಮತ್ತು ಮಕ್ಕಳನ್ನು ಹೇಗೆ ನೋಡಿಕೊಳ್ಳುತ್ತಾರೆ ಎನ್ನುವುದು ಅವರಿಗೆ ತಿಳಿಯಲು ಹೇಗೆ ಸಾಧ್ಯ. ಇದೇ ಕಾರಣಕ್ಕಾಗಿ ಅವರು ಇನ್ನೊಬ್ಬರ ಮನೆಗೆ ಇಣುಕುತ್ತಾರೆ. ಇನ್ನೊಬ್ಬರ ಮನೆಯೊಳಗೆ ಇಣುಕುವುದು ಒಳ್ಳೆಯದಲ್ಲ ಮೋದಿಜಿ” ಎಂದವರು ಹೇಳಿದರು.
ಶರದ್ ಪವಾರ್ ಅವರ ಕುಟುಂಬದೊಳಗಿನ ಜಗಳದ ಬಗ್ಗೆ ಪ್ರಧಾನಿ ಹೇಳಿಕೆ ನೀಡಿದ ನಂತರ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.