ಕಾಂಗ್ರೆಸ್‌ನ ‘ಚೌಕೀ ದಾರ್ ಚೋರ್ ಹೈ’ ಜಾಹೀರಾತಿಗೆ ಮಧ್ಯಪ್ರದೇಶದಲ್ಲಿ ನಿಷೇಧ

Update: 2019-04-18 15:35 GMT

ಹೊಸದಿಲ್ಲಿ, ಎ. 17: ಕಾಂಗ್ರೆಸ್‌ನ ‘ಚೌಕಿದಾರ್ ಚೋರ್ ಹೈ’ ಜಾಹೀರಾತನ್ನು ಮಧ್ಯಪ್ರದೇಶದಲ್ಲಿ ಪ್ರಚಾರ ಮಾಡುವುದಕ್ಕೆ ಚುನಾವಣಾ ಆಯೋಗ ಗುರುವಾರ ನಿಷೇಧ ವಿಧಿಸಿದೆ. ಜಾಹೀರಾತು ಪ್ರಚಾರವನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಮಧ್ಯಪ್ರದೇಶದ ಜಂಟಿ ಮುಖ್ಯ ಚುನಾವಣಾ ಆಯುಕ್ತ ರಾಜೇಶ್ ಕೌಲ್ ಕಾಂಗ್ರೆಸ್‌ಗೆ ತಿಳಿಸಿದ್ದಾರೆ.

ಈ ಜಾಹೀರಾತು ಪ್ರಧಾನಿ ಮೋದಿ ಅವರ ಮೇಲೆ ವೈಯಕ್ತಿಕವಾಗಿ ದಾಳಿ ಮಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿತ್ತು. ಈ ಜಾಹೀರಾತನ್ನು ಮಾಧ್ಯಮ ಪ್ರಮಾಣೀಕರಣ ಹಾಗೂ ಪರಿಶೀಲನಾ ಸಮಿತಿ ಈಗಾಗಲೇ ರದ್ದುಗೊಳಿಸಿರುವುದರಿಂದ ಕಾಂಗ್ರೆಸ್ ಈ ಜಾಹೀರಾತು ಪ್ರಚಾರ ಮಾಡುವುದನ್ನು ಸ್ಥಗಿತಗೊಳಿಸಬೇಕು ಎಂದು ಜಂಟಿ ಮುಖ್ಯ ಚುನಾವಣಾ ಆಯುಕ್ತರು ರಾಜ್ಯ ಎಲ್ಲಾ ಜಿಲ್ಲಾ ಕಚೇರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕಾಂಗ್ರೆಸ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯ ಚುನಾವಣಾ ಆಯುಕ್ತ ವಿ.ಎಲ್ ಕಾಂತರಾವ್ ನಿರ್ದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News