ರಾಹುಲ್, ಪ್ರಿಯಾಂಕಾ ವಿರುದ್ಧ ಹೇಳಿಕೆ: ಬಿಜೆಪಿ ವರಿಷ್ಠರಿಗೆ ನೋಟಿಸ್

Update: 2019-04-18 15:43 GMT

ಶಿಮ್ಲಾ, ಎ. 18: ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಹಿಮಾಚಲ ಪ್ರದೇಶದ ಬಿಜೆಪಿ ವರಿಷ್ಠ ಸತ್ಪಾಲ್ ಸಿಂಗ್ ಸಟ್ಟಿಗೆ ಚುನಾವಣಾ ಆಯೋಗ ಇನ್ನೊಂದು ನೋಟಿಸ್ ಜಾರಿ ಮಾಡಿದೆ.

ಚುನಾವಣಾ ಆಯೋಗದ ವಿಚಕ್ಷಣಾ ತಂಡ ಚುನಾವಣಾ ಆಯೋಗಕ್ಕೆ ಫಾರ್ವರ್ಡ್ ಮಾಡಿದ ಸತ್ಪಾಲ್ ಸಿಂಗ್ ಸಟ್ಟಿ ಅವರ ಭಾಷಣದ ವೀಡಿಯೊವನ್ನು ಆಧಾರವಾಗಿ ಇರಿಸಿಕೊಂಡು ಹಮೀರ್‌ಪುರ ಲೋಕಸಭಾ ಕ್ಷೇತ್ರದ ಅಸಿಸ್ಟೆಂಟ್ ಚುನಾವಣಾ ಅಧಿಕಾರಿ ಆರ್. ರವೀಶ್ ಅವರು ಸಟ್ಟಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬ್ರಹ್ಮಾಚಾರಿಯಾಗಿರುವುದಕ್ಕೆ ಹಾಗೂ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಉಡುಪಿನ ಮಾದರಿ, ಮತದಾರರನ್ನು ಸೆಳೆಯುವ ರೀತಿಗೆ ವ್ಯಂಗ್ಯ ಹೇಳಿಕೆ ನೀಡುವ ಮೂಲಕ ಸಟ್ಟಿ ಮೇಲ್ನೋಟಕ್ಕೆ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ನೋಟಿಸಿನಲ್ಲಿ ಹೇಳಲಾಗಿದೆ.

 ಉನಾ ಜಿಲ್ಲೆಯ ಘನರಿ ತಾಲೂಕಿನ ಭಂಜಾಲ್‌ನಲ್ಲಿ ಎಪ್ರಿಲ್ 14ರಂದು ನಡೆದ ಚುನಾವಣಾ ಪ್ರಚಾರ ರ್ಯಾಲಿ ಸಂದರ್ಭ ಸಟ್ಟಿ ಈ ಹೇಳಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News