ಪೌರತ್ವ ಮಸೂದೆಗೆ ಟೀಕೆ: ಅಸ್ಸಾಂನ ನಾಲ್ವರು ಸಂಪಾದಕರ ವಿರುದ್ಧ ತನಿಖೆಗೆ ಆದೇಶ

Update: 2019-04-18 17:23 GMT

ಹೊಸದಿಲ್ಲಿ, ಎ.18: ಬಿಜೆಪಿ ಸರಕಾರದ ಪೌರತ್ವ ಮಸೂದೆಯನ್ನು ಟೀಕಿಸಿದ ಅಸ್ಸಾಂನ ನಾಲ್ವರು ಸಂಪಾದಕರು ಹಾಗೂ ಸುದ್ದಿ ವಾಹಿನಿಯೊಂದರ ವಿರುದ್ಧ ತನಿಖೆ ನಡೆಸುವಂತೆ ಗೃಹ ಸಚಿವಾಲಯ ಆದೇಶಿಸಿದೆ.

 ಆರೆಸ್ಸೆಸ್‌ನೊಂದಿಗೆ ಸಂಪರ್ಕ ಇರುವ ‘ಲೀಗಲ್ ರೈಟ್ಸ್ ಆಬ್ಸರ್ವೇಟರಿ (ಎಲ್‌ಆರ್‌ಒ)ಎಂಬ ಸಂಘಟನೆ ನೀಡಿದ ದೂರಿನ ಆಧಾರದಲ್ಲಿ ಗೃಹ ಇಲಾಖೆ ಈ ಆದೇಶ ಹೊರಡಿಸಿದ್ದು ಅಸ್ಸಾಂ ಪೊಲೀಸ್ ಮಹಾನಿರ್ದೇಶಕ ಕುಲಧರ್ ಸೈಕಿಯಾ ಹಾಗೂ ಆಯುಕ್ತ ಮತ್ತು ಕಾರ್ಯದರ್ಶಿ (ಗೃಹ ಮತ್ತು ರಾಜಕೀಯ) ಅಶುತೋಷ್ ಅಗ್ನಿಹೋತ್ರಿ ತನಿಖೆ ನಡೆಸುವಂತೆ ಸೂಚಿಸಲಾಗಿದೆ.

ಅಸ್ಸಾಂನ ಜನಪ್ರಿಯ ಸುದ್ದಿವಾಹಿನಿ ಪ್ರತಿದಿನ್ ಟೈಮ್‌ನ ಮುಖ್ಯ ಸಂಪಾದಕ ನಿತುಮೋನಿ ಸೈಕಿಯಾ, ಅಸೋಮಿಯಾ ಪ್ರತಿದಿನ್‌ನ ಸಂಪಾದಕ ಮಂಜಿತ್ ಮಹಾಂತ, ಅಸ್ಸಾಂ ಸುದ್ದಿವಾಹಿನಿ ಪ್ರಜಾ ನ್ಯೂಸ್‌ನ ಸಂಪಾದಕ ಅಜಿತ್ ಕುಮಾರ್ ಭುಯಾನ್, ಹಾಗೂ ‘ಇನ್‌ಸೈಡ್ ಎನ್‌ಇ’ ವೆಬ್ ಸುದ್ದಿ ಪೋರ್ಟಲ್‌ನ ಸಂಪಾದಕಿ ಅಫ್ರಿದಾ ಹುಸೇನ್, ಹಾಗೂ ಟಿವಿ 18ರ ಅಸ್ಸಾಂ ವಿಭಾಗದ ವಿರುದ್ಧ ದೂರು ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News