ಶ್ರೀಲಂಕಾದ ಚರ್ಚ್, ಹೊಟೇಲ್‌ಗಳಲ್ಲಿ ಸರಣಿ ಬಾಂಬು ಸ್ಫೋಟ: ಸಾವಿನ ಸಂಖ್ಯೆ 138ಕ್ಕೇರಿಕೆ

Update: 2019-04-21 07:19 GMT

ಕೊಲಂಬೊ, ಎ.21: ಶ್ರೀಲಂಕಾದ ರಾಜಧಾನಿಯ ಸುತ್ತಮುತ್ತ ರವಿವಾರ ಮೂರು ಚರ್ಚ್ ಹಾಗೂ ಮೂರು ಪಂಚತಾರಾ ಹೊಟೇಲ್‌ಗಳಲ್ಲಿ ಸಂಭವಿಸಿರುವ ಸರಣಿ ಬಾಂಬು ಸ್ಫೋಟ ಘಟನೆಯಲ್ಲಿ ಸಾವನ್ನಪ್ಪಿರುವ ಸಂಖ್ಯೆ 138ಕ್ಕೆ ಏರಿಕೆಯಾಗಿದೆ. 400ಕ್ಕೂ ಅಧಿಕ ಮಂದಿಗೆ ಗಾಯವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮೂರು ಚರ್ಚ್‌ನಲ್ಲಿ ಈಸ್ಟರ್ ಸಂಡೇ ನಿಮಿತ್ತ ಪ್ರಾರ್ಥನೆ ನಡೆಯುತ್ತಿದ್ದಾಗಲೇ ಬಾಂಬು ಸ್ಫೋಟ ಸಂಭವಿಸಿದ್ದು,ಸಾವು-ನೋವಿನ ಸಂಖ್ಯೆಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಘಟನೆಯಲ್ಲಿ 9 ವಿದೇಶಿ ಪ್ರಜೆಗಳು ಸಾವನ್ನಪ್ಪಿದ್ದಾರೆಂದು ಮೂಲಗಳು ತಿಳಿಸಿವೆ.

ಶ್ರೀಲಂಕಾದ ಪ್ರಧಾನಿ ರಾನಿಲ್ ವಿಕ್ರಮೆಸಿಂೆ ತುರ್ತು ಸಭೆಯನ್ನು ಕರೆದಿದ್ದಾರೆ. ಮತ್ತೊಂದೆಡೆ, ಭಾರತದ ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್, ತಾನು ಶ್ರೀಲಂಕಾದಲ್ಲಿರುವ ಭಾರತದ ರಾಯಭಾರಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಎಲ್ಲ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವೆ ಎಂದು ಟ್ವೀಟ್ ಮಾಡಿದ್ದಾರೆ.

2009ರ ತನಕ ತಮಿಳು ಪ್ರತ್ಯೇಕತಾವಾದಿಗಳೊಂದಿಗೆ ಆಂತರಿಕ ಯುದ್ಧ ನಡೆಸುತ್ತಾ ಬಂದಿದ್ದ್ದ ಶ್ರೀಲಂಕಾದಲ್ಲಿ 10 ವರ್ಷಗಳ ಬಳಿಕ ಭೀಕರ ಸಾವು-ನೋವು ಘಟನೆ ನಡೆದಿದ್ದು, ಈ ತನಕ ಯಾವುದೇ ಸಂಘಟನೆಗಳು ಬಾಂಬುಸ್ಫೋಟದ ಜವಾಬ್ದಾರಿ ಹೊತ್ತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News