ಸುಪ್ರೀಂಕೋರ್ಟ್ ನ ಕ್ಷಮೆಯಾಚಿಸಿದ ರಾಹುಲ್ ಗಾಂಧಿ

Update: 2019-04-22 07:38 GMT

ಹೊಸದಿಲ್ಲಿ, ಎ.22: ರಫೆಲ್ ಯುದ್ದ ವಿಮಾನ ಒಪ್ಪಂದ ಕುರಿತ ವಿಚಾರಣೆಯ ವೇಳೆ ಸುಪ್ರೀಂಕೋರ್ಟ್ ‘ಚೋಕಿದಾರ್ ಚೋರ್ ಹೈ’ ಎಂದು ತಿಳಿಸಿದೆ ಎಂದು ಹೇಳಿಕೆ ನೀಡಿದ್ದಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸುಪ್ರೀಂಕೋರ್ಟ್‌ನ ಕ್ಷಮೆಯಾಚಿಸಿದ್ದಾರೆ.

‘‘ನಾನು ನೀಡಿರುವ ಹೇಳಿಕೆಯನ್ನು ವಿರೋಧ ಪಕ್ಷಗಳು ದುರ್ಬಳಕೆ ಮಾಡಿವೆ. ಚುನಾವಣಾ ರ್ಯಾಲಿಯಲ್ಲಿ ಮಾತಿನ ಭರದಲ್ಲಿ ನಾನು ಈ ಹೇಳಿಕೆ ನೀಡಿದ್ದೇನೆ. ನನ್ನ ಈ ಹೇಳಿಕೆಗೆ ಕ್ಷಮೆಯಾಚಿಸುತ್ತೇನೆ. ನ್ಯಾಯಾಲಯ ದಾಖಲಿಸುವ ತನಕ ನಾನು ಮಾಧ್ಯಮ ಹಾಗೂ ಸಾರ್ವಜನಿಕ ರ್ಯಾಲಿಗಳಲ್ಲಿ ನ್ಯಾಯಾಲಯದ ಯಾವುದೇ ವಿಚಾರ, ಟಿಪ್ಪಣಿ ಹಾಗೂ ನಿಷ್ಕರ್ಷವನ್ನು ವರ್ಣಿಸುವುದಿಲ್ಲ ಎಂದು ಸುಪ್ರೀಂಕೋರ್ಟ್‌ಗೆ ರಾಹುಲ್ ತಿಳಿಸಿದ್ದಾರೆ.

 ರಫೆಲ್ ಕುರಿತ ನ್ಯಾಯಾಲಯದ ತೀರ್ಪನ್ನು ಹೊಗಳುತ್ತಾ, ‘ಚೋಕಿದಾರ್ ಚೋರ್ ಹೈ’ಎಂದು ತನ್ನದೇ ಹೇಳಿಕೆ ನೀಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ರಾಹುಲ್‌ರಿಂದ ವಿವರಣೆ ಕೋರಿ ನೋಟಿಸ್ ಜಾರಿ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News