ಜಯಪ್ರದಾ ಬಗ್ಗೆ ಆಝಂ ಖಾನ್ ಪುತ್ರನಿಂದ ವಿವಾದಾತ್ಮಕ ಹೇಳಿಕೆ

Update: 2019-04-22 12:30 GMT

ರಾಮಪುರ್, ಎ.22: “ನಮಗೆ ಅಲಿ ಮತ್ತು ಬಜರಂಗಬಲಿ ಬೇಕು, ಅನಾರ್ಕಲಿ ಅಲ್ಲ'' ಎಂದು ಹೇಳುವ ಮೂಲಕ ಸಮಾಜವಾದಿ ಪಕ್ಷದ ರಾಮಪುರ್ ಅಭ್ಯರ್ಥಿ ಆಝಂ ಖಾನ್ ಅವರ ಪುತ್ರ ಅಬ್ದುಲ್ಲಾ ಆಝಂ ಖಾನ್ ವಿವಾದ ಸೃಷ್ಟಿಸಿದ್ದಾರೆ.

ರವಿವಾರ ಪ್ರಚಾರದ ಅಂತಿಮ ದಿನ ರಾಮಪುರ್ ಕ್ಷೇತ್ರದ ಪಾನ್ ದರೇಬಾ ಎಂಬಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅಬ್ದುಲ್ಲಾ ಆಝಂ “ಅಲಿ ಭಿ ಹಮಾರೆ, ಬಜರಂಗಬಲಿ ಭೀ ಹಮಾರೆ, ಹಮೇನ್ ಆಲಿ ಭೀ ಚಾಯಿಯೆ, ಬಜರಂಗಬಲಿ ಭೀ ಚಾಹಿಯೆ, ಲೇಕಿನ್ ಅನಾರ್ಕಲಿ ನಹೀ ಚಾಹಿಯೆ'' ಎಂದಿದ್ದಾರೆ.

ಆಝಂ ಖಾನ್ ಈ ಹಿಂದೆ `ಖಾಕಿ ಒಳಉಡುಪು' ಹೇಳಿಕೆಯ ಮೂಲಕ ಜಯಪ್ರದಾರನ್ನು ನಿಂದಿಸಿ 72 ಗಂಟೆಗಳ ಕಾಲ  ಪ್ರಚಾರ ನಡೆಸದಂತೆ ಚುನಾವಣಾ ಆಯೋಗದಿಂದ ಶಿಕ್ಷೆ ಅನುಭವಿಸಬೇಕಾಗಿ ಬಂದಿತ್ತು.

ರವಿವಾರದ ಸಭೆಯಲ್ಲಿ ಮಗನ ಜತೆ ಉಪಸ್ಥಿತರಿದ್ದ ಆಝಂ ಖಾನ್ ಮಾತನಾಡುತ್ತಾ ``ಅವರು (ಪ್ರಧಾನಿ ಮೋದಿ ಹಾಗೂ ಸಿಎಂ ಆದಿತ್ಯನಾಥ್) ನನ್ನನ್ನು ದೇಶದ್ರೋಹಿ ಎಂದಿದ್ದರು. ಆದರೆ ಅವರ ಕೋಮುವಾದದ ರಾಜಕೀಯದಿಂದ ದೇಶ ವಿನಾಶದ ಅಂಚಿನಲ್ಲಿದೆ'' ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News