ಟಿಕ್ ಟೋಕ್ ಆ್ಯಪ್ ಮನವಿಯನ್ನು ಎಪ್ರಿಲ್ 24ರಂದು ನಿರ್ಧರಿಸಿ

Update: 2019-04-22 16:28 GMT

ಹೊಸದಿಲ್ಲಿ, ಎ. 22: ಟಿಕ್ ಟೋಕ್ ಆ್ಯಪ್‌ನ ನಿಷೇಧ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಮನವಿಯನ್ನು ಎಪ್ರಿಲ್ 24ರಂದು ನಿರ್ಧರಿಸಿ ಎಂದು ಸುಪ್ರೀಂ ಕೋರ್ಟ್ ಸೋಮವಾರ ಮದ್ರಾಸ್ ಉಚ್ಚ ನ್ಯಾಯಾಲಯಕ್ಕೆ ನಿರ್ದೇಶಿಸಿದೆ.

ಟಿಕ್ ಟೋಕ್ ಆ್ಯಪ್‌ನ ಮನವಿ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಮದ್ರಾಸ್ ಉಚ್ಚ ನ್ಯಾಯಾಲಯ ವಿಫಲವಾದರೆ, ಟಿಕ್ ಟೋಕ್ ಆ್ಯಪ್‌ನ ಮೇಲಿನ ನಿಷೇಧ ತೆರವುಗೊಳಿಸಲಾಗುವುದು ಎಂದು ರಂಜನ್ ಗೊಗೊಯಿ ನೇತೃತ್ವದ ಪೀಠ ಹೇಳಿದೆ.

ಮದ್ರಾಸ್ ಉಚ್ಚ ನ್ಯಾಯಾಲಯ ನಿಷೇಧ ಆದೇಶ ರದ್ದುಗೊಳಿಸಲು ಈ ಹಿಂದೆ ನಿರಾಕರಿಸಿರುವ ಸುಪ್ರೀಂ ಕೋರ್ಟ್, ಅಶ್ಲೀಲ ಅಂಶಗಳನ್ನು ಹೊಂದಿರುವುದರಿಂದ ಟಿಕ್ ಟೋಕ್ ಆ್ಯಪ್‌ನ ಮೇಲೆ ನಿಷೇಧ ಹೇರುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಿತ್ತು.

ಚೀನಾ ಕಂಪೆನಿ ಬೈಟೆಡಾನ್ಸೆ ಪರವಾಗಿ ಹಾಜರಾದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ನ್ಯಾಯಾಲಯದ ಮುಂದೆ ಹಾಜರಾಗಿದ್ದರು.

ನ್ಯಾಯಾಲಯ ಈ ವಿಷಯದಲ್ಲಿ ನೋಟಿಸನ್ನು ಕೂಡ ನೀಡಿಲ್ಲ. ಅವರನ್ನು ಆಲಿಸದೆ ಆದೇಶ ಮಂಜೂರು ಮಾಡಲಾಗಿದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದರು. ಇಂತಹ ಆ್ಯಪ್‌ಗಳಲ್ಲಿ ಅಶ್ಲೀಲ ಅಂಶಗಳು ಲಭ್ಯವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಉಚ್ಚ ನ್ಯಾಯಾಲಯ ಮೊಬೈಲ್ ಅಪ್ಲಿಕೇಶನ್ ಟಿಕ್ ಟೋಕ್‌ಗೆ ನಿಷೇಧ ವಿಧಿಸುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News