ಹಾಮಿದ್ ಹಸನ್, ಅಸ್ಗರ್‌ಗೆ ಸ್ಥಾನ

Update: 2019-04-22 18:33 GMT

ಕಾಬೂಲ್, ಎ.22: ಐಸಿಸಿ ವಿಶ್ವಕಪ್‌ಗೆ 15 ಸದಸ್ಯರ ಅಫ್ಘಾನಿಸ್ತಾನ ತಂಡವನ್ನು ಪ್ರಕಟಿಸಲಾಗಿದ್ದು, ವೇಗಿ ಹಾಮಿದ್ ಹಸನ್ ಹಾಗೂ ಮಾಜಿ ನಾಯಕ ಅಸ್ಗರ್ ಅಫ್ಘಾನ್ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಐಪಿಎಲ್‌ನಲ್ಲಿ ಮಿಂಚುತ್ತಿರುವ ರಶೀದ್ ಖಾನ್ ಹಾಗೂ ಮುಹಮ್ಮದ್ ನಬಿ ತಂಡದ ಪ್ರಮುಖ ಆಕರ್ಷಣೆಯಾಗಿದ್ದಾರೆ.

ಗುಲ್ಬಾದಿನ್ ನೈಬ್ ನಾಯಕತ್ವದ ತಂಡದಲ್ಲಿ ಮುಹಮ್ಮದ್ ಶಹಝಾದ್ ಹಾಗೂ ಸ್ಪಿನ್ನರ್ ಮುಜೀಬುರ್ರಹ್ಮಾನ್. ಕೂಡ ಇದ್ದಾರೆ.ಈ ವರ್ಷದ ಆರಂಭದಲ್ಲಿ ಅಫ್ಘಾನ್ ಅವರನ್ನು ತಂಡದ ಎಲ್ಲ ಮಾದರಿಯ ನಾಯಕತ್ವದಿಂದ ತೆಗೆದುಹಾಕಲಾಗಿತ್ತು. ಸುಮಾರು ಮೂರು ವರ್ಷಗಳ ವಿರಾಮದ ನಂತರ ಹಸನ್ ಮರಳಿ ತಂಡ ಸೇರಿಕೊಂಡಿದ್ದಾರೆ.

‘‘ಹಿರಿಯ ವೇಗದ ಬೌಲರ್ ಹಾಮಿದ್ ಹಸನ್ ತಂಡಕ್ಕೆ ಮರಳಿದ್ದು ನಮ್ಮ ಅದೃಷ್ಟ. ಆದಾಗ್ಯೂ ಅವರ ಫಾರ್ಮ್ ಹಾಗೂ ಫಿಟ್ನೆಸ್ ಬಗ್ಗೆ ಮುಂಬರುವ ಅಭ್ಯಾಸ ಪಂದ್ಯಗಳಲ್ಲಿ ಗಮನಹರಿಸಲಾಗುವುದು’’ ಎಂದು ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ದೌಲತ್ ಖಾನ್ ಅಹ್ಮದ್‌ಝೈ ತಿಳಿಸಿದ್ದಾರೆ.

ಇಕ್ರಮ್ ಅಲಿಖಿಲ್, ಕರೀಮ್ ಜನತ್ ಹಾಗೂ ಸಯ್ಯದ್ ಶಿರ್ಝಾದ್ ಅವರನ್ನು ಮೀಸಲು ಆಟಗಾರರನ್ನಾಗಿ ಸೇರಿಸಲಾಗಿದೆ.

ಅಫ್ಘಾನಿಸ್ತಾನ ತಂಡ

ಗುಲ್ಬಾದಿನ್ ನೈಬ್ (ನಾಯಕ), ಮುಹಮ್ಮದ್ ಶಹಝಾದ್, ನೂರ್ ಅಲಿ ಖಾನ್, ಹಝ್ರತುಲ್ಲಾ ಝಝೈ, ರಹಮತ್ ಶಾ, ಅಸ್ಗರ್ ಅಫ್ಘಾನ್, ಹಶ್ಮತುಲ್ಲಾ ಶಾಹಿದಿ, ನಜೀಬುಲ್ಲಾ ಝದ್ರಾನ್, ಸಮೀವುಲ್ಲಾ ಶಿನ್ವಾರಿ, ಮುಹಮ್ಮದ್ ನಬಿ, ರಶೀದ್ ಖಾನ್, ದೌಲತ್ ಖಾನ್, ಅಫ್ತಾಬ್ ಆಲಂ, ಹಾಮಿದ್ ಹಸನ್ ಮತ್ತು ಮುಜೀಬುರ್ರಹ್ಮಾನ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News