ಸಿಬಿಐ, ಐಬಿ, ದಿಲ್ಲಿ ಪೊಲೀಸ್ ಆಯುಕ್ತರಿಗೆ ಸುಪ್ರೀಂಕೋರ್ಟ್ ಸಮನ್ಸ್

Update: 2019-04-24 07:21 GMT

ಹೊಸದಿಲ್ಲಿ, ಎ.24: ಭಾರತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಒಂದು ಪಿತೂರಿಯಾಗಿದೆ ಎಂದು ಹೇಳಿರುವ ವಕೀಲ ಉಸ್ತವ್ ಬೈನ್ಸ್ ತನ್ನ ಹೇಳಿಕೆಗೆ ಪೂರಕವಾಗಿರುವ ಪುರಾವೆಗಳನ್ನು ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂಕೋರ್ಟ್‌ಗೆ ಬುಧವಾರ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಸ್ಟಿಸ್ ಅರುಣ್ ಮಿಶ್ರಾ, ಆರ್‌ಎಫ್ ನಾರಿಮನ್ ಹಾಗೂ ದೀಪಕ್ ಗುಪ್ತಾ ಅವರಿದ್ದ ನ್ಯಾಯಪೀಠ ಸಿಬಿಐ, ಗುಪ್ತಚರ ಇಲಾಖೆ ಹಾಗೂ ದಿಲ್ಲಿ ಪೊಲೀಸ್ ಮುಖ್ಯಸ್ಥರಿಗೆ ಮಧ್ಯಾಹ್ನ 12:30ಕ್ಕೆ ನ್ಯಾಯಾಲಯಕ್ಕೆ ಆಗಮಿಸಲು ಸಮನ್ಸ್ ನೀಡಿದೆ.

‘‘ಇದೊಂದು ತನಿಖೆಯಲ್ಲ. ನಾವು ಸಿಬಿಐ, ಐಬಿ ಹಾಗೂ ದಿಲ್ಲಿ ಪೊಲೀಸ್ ಇಲಾಖೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸುತ್ತೇವೆ. ಮೂರು ಇಲಾಖೆಗಳ ಮುಖ್ಯಸ್ಥರು ಮಧ್ಯಾಹ್ನ 12:30ಕ್ಕೆ ನ್ಯಾಯಾಧೀಶರನ್ನು ಅವರ ಚೇಂಬರ್‌ನಲ್ಲಿ ಭೇಟಿಯಾಗುತ್ತಾರೆ. ಮಧ್ಯಾಹ್ನ 3 ಗಂಟೆಗೆ ಮತ್ತೆ ಇದೇ ವಿಚಾರವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ಸುಪ್ರೀಂಕೋರ್ಟ್‌ನ ಮಾಜಿ ಉದ್ಯೋಗಿ ತನ್ನ ಮೇಲೆ ಮಾಡಿರುವ ಲೈಂಗಿಕ ಕಿರುಕುಳ ಆರೋಪವನ್ನು ಬಲವಾಗಿ ನಿರಾಕರಿಸಿರುವ ಮುಖ್ಯ ನ್ಯಾಯಾಧೀಶ ಗೊಗೊಯ್, ನ್ಯಾಯಾಂಗದ ಸ್ವಾತಂತ್ರ ಭೀತಿಯಲ್ಲಿದೆ. ಇದನ್ನು ಬಲಿಪಶು ಮಾಡಲು ಸಾಧ್ಯವಿಲ್ಲ’’ ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News