ಪ್ರತಿ ಬಾರಿ ಭೇಟಿಯಾದಾಗ ‘ಹೆಚ್ಚು ಹೊತ್ತು ನಿದ್ರಿಸುತ್ತಿದ್ದೀರಾ’ ಎಂದು ಒಬಾಮಾ ಕೇಳುತ್ತಾರೆ: ಪ್ರಧಾನಿ ಮೋದಿ

Update: 2019-04-24 10:03 GMT

ಹೊಸದಿಲ್ಲಿ, ಎ.24: ಪ್ರತಿ ಬಾರಿಯೂ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ತನ್ನನ್ನು ಭೇಟಿಯಾದಾಗ, “ನೀವು ಹೆಚ್ಚು ಹೊತ್ತು ಮಲಗುತ್ತಿದ್ದೀರಾ?” ಎಂದು ಪ್ರಶ್ನಿಸುತ್ತಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ‘ರಾಜಕೀಯೇತರ’ ಎಂದು ಹೇಳಲಾದ ನಟ ಅಕ್ಷಯ್ ಕುಮಾರ್ ಜೊತೆಗಿನ ಸಂದರ್ಶನದಲ್ಲಿ ಅವರು ಮಾತನಾಡುತ್ತಾ ಈ ಮಾತುಗಳನ್ನು ಹೇಳಿದ್ದಾರೆ.

“ನೀವು ಕೇವಲ ಮೂರು ಗಂಟೆಗಳ ಕಾಲ ಮಾತ್ರ ನಿದ್ರಿಸುತ್ತೀರಿ. ದೇಹಕ್ಕೆ 7 ಗಂಟೆಗಳ ನಿದ್ರೆಯ ಅವಶ್ಯಕತೆ ಇದೆ” ಎಂದು ಅಕ್ಷಯ್ ಹೇಳಿದಾಗ ಅವರ ಮಾತಿಗೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, “ಬರಾಕ್ ಒಬಾಮಾ ನನ್ನನ್ನು ಮೊದಲ ಬಾರಿ ಭೇಟಿಯಾದಾಗ ನೀವು ಏಕೆ ಹೀಗೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದರು. ಈಗ ಪ್ರತಿ ಬಾರಿ ಭೇಟಿಯಾದಾಗಲೂ ನೀವು ನಿದ್ದೆಯ ಸಮಯವನ್ನು ಹೆಚ್ಚಿಸಿದ್ದೀರಾ ಎಂದು ಪ್ರಶ್ನಿಸುತ್ತಾರೆ” ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News