ಬಿಜೆಪಿ ಸೇರಿದ ಸನ್ನಿ ಡಿಯೋಲ್ ರನ್ನು 'ಯುವ ನಟ' ಎಂದ ರಕ್ಷಣಾ ಸಚಿವೆ: ಟ್ವಿಟರ್ ಪ್ರತಿಕ್ರಿಯಿಸಿದ್ದು ಹೀಗೆ…

Update: 2019-04-24 11:15 GMT

ಹೊಸದಿಲ್ಲಿ, ಎ.24: ನಟ ಸನ್ನಿ ಡಿಯೋಲ್ ಅವರನ್ನು ಬಿಜೆಪಿಗೆ ಬರ ಮಾಡಿಕೊಳ್ಳುವ ಭರದಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಆಡಿದ ಹಲವು ಉತ್ಪ್ರೇಕ್ಷೆಯ ಮಾತುಗಳು ಟ್ವಿಟ್ಟರಿಗರಿಂದ ಟ್ರೋಲ್ ಗೊಳಗಾಯಿತು. “ಬೆಂಕಿ ಚೆಂಡು,'' ``ಯುವ ನಟ'' ಎಂದೆಲ್ಲಾ ರಕ್ಷಣಾ ಸಚಿವೆ ಸನ್ನಿ ಡಿಯೋಲ್ ಅವರನ್ನು ಹೊಗಳಿ ಬಿಟ್ಟರು. ಬೇರೆ ಹೊಗಳಿಕೆ ವಿಚಾರ ಬಿಡಿ, ಸನ್ನಿಯನ್ನು `ಯುವ ನಟ' ಎಂದಿದ್ದು ಟ್ವಟ್ಟರಿಗರಿಗೆ ಹಿಡಿಸಿಲ್ಲ. ವಾಸ್ತವವೇನೆಂದರೆ ಸನ್ನಿ ಡಿಯೋಲ್ ಗೆ ವಯಸ್ಸು 62 ಹಾಗೂ ಸಚಿವೆಗೆ 59. ಅವರು ರಕ್ಷಣಾ ಸಚಿವರಿಗಿಂತಲೂ ವಯಸ್ಸಿನಲ್ಲಿ ಮೂರು ವರ್ಷ ಹಿರಿಯವರು. ಆದರೂ ಸಚಿವೆ ನಟನನ್ನು ಯುವ ನಟ ಎಂದಿದ್ದಾರೆ.

“ಜನಪ್ರಿಯ, ಯುವ, ಮಹೋನ್ನತ  ನಟ, ಕಲೆಗೆ ತಮ್ಮ ಜೀವನ ಮುಡಿಪಾಗಿಸಿದ ನಟ ಸನ್ನಿ ಡಿಯೋಲ್ ಅವರನ್ನು ಸ್ವಾಗತಿಸಲು ಸಂತೋಷವಿದೆ,'' ಎಂದ ಸಚಿವೆಯ ಮಾತುಗಳು ಸುದ್ದಿಯಾಗಿದ್ದೇ ತಡ ಒಬ್ಬರು ಟ್ವಿಟ್ಟರಿಗ, “ಯುವ ಕಲಾವಿದ ? ಆತ ನಿಮಗಿಂತಲೂ ಹಿರಿಯರು!” ಎಂದು ಬಿಟ್ಟರೆ ಇನ್ನೊಬ್ಬರು, “ಏನು ಯುವ ನಟ? ಇನ್ನೆಂಟು ವರ್ಷಗಳಲ್ಲಿ ಅವರು ಮಾರ್ಗದರ್ಶಕ ಮಂಡಳಿಯಲ್ಲಿರುತ್ತಾರೆ'' ಎಂದು ಬರೆದಿದ್ದಾರೆ.

ಸನ್ನಿ ಡಿಯೋಲ್ ಅವರನ್ನು ಬಿಜೆಪಿ ಗುರುದಾಸಪುರ್ ಅಭ್ಯರ್ಥಿಯನ್ನಾಗಿ ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News