ಶ್ರೀಲಂಕಾದಲ್ಲಿ ಮತ್ತೆ ಬಾಂಬ್ ಸ್ಫೋಟ
Update: 2019-04-26 23:15 IST
ಕಲ್ಮುನೈ,ಎ.26: ಈಸ್ಟರ್ ರವಿವಾರ ಸಂಭವಿಸಿದ್ದ ಸರಣಿ ಸ್ಫೋಟಗಳಿಂದ ತತ್ತರಿಸಿದ್ದ ದ್ವೀಪರಾಷ್ಟ್ರ ಶ್ರೀಲಂಕಾದ ಕಲ್ಮುನೈ ನಗರದಲ್ಲಿ ಶುಕ್ರವಾರ ಭದ್ರತಾ ಪಡೆಗಳು ಸರಣಿ ಸ್ಫೋಟದ ಶಂಕಿತ ಆರೋಪಿಗಳಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಮೂರು ಭಾರೀ ಸ್ಫೋಟಗಳು ಸಂಭವಿಸಿವೆ. ಈ ಸ್ಫೋಟಗಳಲ್ಲಿ ಯಾವುದೇ ಸಾವುನೋವು ಅಥವಾ ಆಸ್ತಿನಷ್ಟ ಸಂಭವಿಸಿರುವ ಬಗ್ಗೆ ಈವರೆಗೆ ವರದಿಯಾಗಿಲ್ಲ.
ಸಮ್ಮಂಥುರೈನಲ್ಲಿ ದಾಳಿಗಳ ಸಂದರ್ಭ ಇಸ್ಲಾಮಿಕ್ ಸ್ಟೇಟ್‌ನ ಸಮವಸ್ತ್ರಗಳು,ಐಸಿಸ್ ಧ್ವಜಗಳು,150 ಜಿಲೆಟಿನ್ ಕಡ್ಡಿಗಳು,1,00,000 ಬಾಲ್‌ಬೇರಿಂಗ್‌ಗಳು ಮತ್ತು ಒಂದು ಡ್ರೋನ್ ಕ್ಯಾಮರಾವನ್ನು ಶ್ರೀಲಂಕಾ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಸಿಎನ್‌ಎನ್ ವರದಿ ಮಾಡಿದೆ.