ಬಿಜೆಪಿ ಅಭ್ಯರ್ಥಿ ಗಂಭೀರ್ ವಿರುದ್ಧ ಪ್ರಕರಣ ದಾಖಲು

Update: 2019-04-27 10:11 GMT

ಹೊಸದಿಲ್ಲಿ, ಎ.27: ಅನುಮತಿಯಿಲ್ಲದೆಯೇ ರ್ಯಾಲಿ ನಡೆಸಿದ್ದಕ್ಕಾಗಿ ದಿಲ್ಲಿ ಪೊಲೀಸರು ಪೂರ್ವ ದಿಲ್ಲಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಚುನಾವಣಾ ಆಯೋಗದ ನಿರ್ದೇಶನದಂತೆ ಈ ಪ್ರಕರಣ ದಾಖಲಿಸಲಾಗಿದೆ.

ಎಪ್ರಿಲ್ 25ರಂದು ದಿಲ್ಲಿಯ ಜಂಗ್ಪುರ ಪ್ರದೇಶದಲ್ಲಿ ಗಂಭೀರ್ ನಡೆಸಿದ ರ್ಯಾಲಿ ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.

ಹಾಲಿ ಬಿಜೆಪಿ ಸಂಸದ ಮಹೇಶ್ ಗಿರಿ ಬದಲು ಇತ್ತೀಚೆಗಷ್ಟೇ ಪಕ್ಷ ಸೇರಿದ್ದ ಗಂಭೀರ್ ಅವರನ್ನು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿತ್ತು.

ಇದೀಗ ಅವರ ವಿರುದ್ಧ ಪ್ರಕರಣ ದಾಖಲಿಸಿರುವ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿದ ಎಎಪಿ ನಾಯಕಿ ಆತಿಷಿ, “ ಮೊದಲು ನಾಮಪತ್ರದಲ್ಲಿ ನ್ಯೂನತೆಗಳು, ನಂತರ ಎರಡು ವೋಟರ್ ಐಡಿ ಹೊಂದಿದ ಆರೋಪ, ಈಗ ಅಕ್ರಮ ರ್ಯಾಲಿ ನಡೆಸಿದ್ದಕ್ಕಾಗಿ ಎಫ್‍ಐಆರ್, ನಿಯಮಗಳು ತಿಳಿದಿಲ್ಲದೇ ಇರುವಾಗ ಆಟವೇಕೆ ಆಡಬೇಕು?'' ಎಂದು ಪ್ರಶ್ನಿಸಿ ಗಂಭೀರ್ ಅವರನ್ನು ಅಣಕವಾಡಿದ್ದಾರೆ.    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News